Friday, June 19, 2026
spot_imgspot_img
spot_imgspot_img

ಬೆಳ್ತಂಗಡಿ: ನೀರುಪಾಲಾದ ಮಹಿಳೆಯ ಮೃತದೇಹ ಪತ್ತೆ!

- Advertisement -
- Advertisement -

ಬೆಳ್ತಂಗಡಿ: ಸೊಪ್ಪು ತರಲೆಂದು ತೆರಳಿ ನೀರುಪಾಲಾಗಿದ್ದ ಮಹಿಳೆಯ ಮೃತದೇಹವು ಗುಂಡ್ಯ ಹೊಳೆಯ ಎಂಜಿರ ಎಂಬಲ್ಲಿ ಪತ್ತೆಯಾಗಿದೆ.

ಕಡಬ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಸಮೀಪದ ಉರ್ನಡ್ಕ ನಿವಾಸಿ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ ಎಂಬವರು ಶನಿವಾರ ಬೆಳಿಗ್ಗೆ ಸೊಪ್ಪು ತರಲೆಂದು ಮನೆಯಿಂದ ತೆರಳಿದ್ದರು. ಮಹಿಳೆಯ ಚಪ್ಪಲಿ ಹೊಳೆ ಸಮೀಪ ದೊರೆತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಇದನ್ನೂ ಓದಿ: ಆನ್​ಲೈನ್​ ಗೇಮ್​ ಗೆ ಬಲಿಯಾದ 13 ವರ್ಷದ ಬಾಲಕ; ಕಳೆದುಕೊಂಡಿದ್ದು ಎಷ್ಟು ಹಣ ಗೊತ್ತಾ?

ಮಹಿಳೆ ನಾಪತ್ತೆಯಾಗುವ ಮೊದಲು ಹಿರಿಯ ಮಗನಿಗೆ ಕರೆ ಮಾಡಿ ಕಿರಿಯ ಮಗನ ಮದುವೆಯ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಮಹಿಳೆ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಬೆಳ್ತಂಗಡಿ: “ತಮ್ಮನ ಮದುವೆ ಜವಾಬ್ದಾರಿ ನೀನೆ ನೋಡಿಕೊಳ್ಳಬೇಕು”ಹಿರಿಮಗನಿಗೆ ಕರೆಮಾಡಿ ಮಹಿಳೆ ನಾಪತ್ತೆ; ಆತ್ಮಹತ್ಯೆಯ ಶಂಕೆ

ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ನದಿಯನ್ನು ಪರಿಶೀಲಿಸಿದಾಗ ಇಂದು ಎಂಜಿರ ಎಂಬಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

driving
- Advertisement -

Related news

error: Content is protected !!