- Advertisement -
- Advertisement -



ಕಾಸರಗೋಡು: ಲಾರಿ ಮತ್ತು ಪಿಕಪ್ ವ್ಯಾನ್ ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಪಾಪಿನಿಶೇರಿ ಕರಿಕನ್ ಕುಳಂ ಎಂಬಲ್ಲಿ ಘಟನೆ ನಡೆದಿದೆ. ತ್ರಿಕರಿಪುರ ಉಡುಂಬುಮತ್ತಲ ನಿವಾಸಿ ಎಂ.ಕೆ. ಅಸ್ಲಾಂ (34) ಮೃತಪಟ್ಟವರು.
ಕಣ್ಣೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ಲಾರಿ, ಅಸ್ಲಾಂ ಅವರು ಚಲಾಯಿಸುತ್ತಿದ್ದ ಪಿಕಪ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಸ್ಲಾಂ ವ್ಯಾನ್‌ನಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯ ಹಾಗೂ ಪೊಲೀಸರು ನಜ್ಜುಗುಜ್ಜಾದ ವಾಹನದಿಂದ ಚಾಲಕನನ್ನು ಹೊರಗೆಳೆದಿದ್ದಾರೆ. ಗಾಯಳುವನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಮೃತಪಟ್ಟಿದ್ದಾರೆ.
- Advertisement -