Tuesday, April 30, 2024
spot_imgspot_img
spot_imgspot_img

ಉದ್ದಿಮೆಗಳ ಶ್ರೇಯಸ್ಸಿಗೆ ಝೆಡ್ ಸರ್ಟಿಫಿಕೇಟ್ ವರದಾನ

- Advertisement -G L Acharya panikkar
- Advertisement -

ದೇಶಾದದ್ಯಾಂತ ಇರುವ ಉದ್ದಿಮೆಗಳನ್ನು ಉನ್ನತ ಹಂತಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ MSME ಸಚಿವಾಲಯ ವಿಶೇಷ ಯೋಜನೆಯನ್ನು ಕೈಗೊಂಡಿದ್ದು ಇದರಿಂದ ಉದ್ದಿಮೆದಾರರು ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಝೆಡ್ ಸರ್ಟಿಫಿಕೇಟ್ (ZED- Zero Effect Zero Defect) ಪಡೆಯಲು ಘಟಕಗಳಿಗೆ ಕೆಲವೊಂದು ಮಾನದಂಡಗಳನ್ನು ನಿಗದಿಗೊಳಿಸಲಾಗಿದೆ. ಅಗ್ನಿ ಶಾಮಕ ಉಪಕರಣ, ಕೆಲಸದ ವೇಳೆಯಲ್ಲಿ ಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಬಳಸುವುದು, ಉತ್ಪಾದನಾ ಘಟಕ ಮತ್ತು ಸಂಪೂರ್ಣ ಸ್ವಚ್ಚತೆ ಕಾಪಾಡಿರುವುದು, ಶುಚಿಯಾಗಿರುವ ಶೌಚಾಲಯದ ವ್ಯವಸ್ಥೆ, ಘಟಕಗಳಿಗೆ ಸರಿಯಾದ ನಾಮಫಲಕಗಳನ್ನು ಹೊಂದಿರುವುದು, ಗುಣಮಟ್ಟ ಮತ್ತು ಅಗ್ನಿ ಸುರಕ್ಷತಾ ತರಬೇತಿಯ ದಾಖಲಾತಿಗಳು ಮತ್ತು ವ್ಯವಹಾರದ ದಾಖಲೆಗಳು ಕಡ್ಡಾಯವಾಗಿದೆ.

ಈ ಮೇಲಿನ ಅವಶ್ಯಕತೆಗಳನ್ನು ಪೂರೈಸಿದ ಉದ್ಯಮ ಘಟಕಗಳು ಝೆಡ್ ಸರ್ಟಿಫಿಕೇಟ್ ಪಡೆಯಲು ಅರ್ಹರಾಗಿರುತ್ತಾರೆ. ಸರ್ಟಿಫಿಕೇಟ್ ಪಡೆದ ಉದ್ಯಮಗಳು ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು.
1. ಅಂತಾರಾಷ್ಟ್ರೀಯ ಯೋಜನೆ ಅಡಿಯಲ್ಲಿ 3.5 ಲಕ್ಷಗಳವರೆಗೆ ಸ್ಟಾಲ್ ಬಾಡಿಗೆ
2. ಅಂತಾರಾಷ್ಟ್ರೀಯ ಯೋಜನೆ ಅಡಿಯಲ್ಲಿ 1.75 ಲಕ್ಷಗಳವರೆಗೆ ವಿಮಾನ ಪ್ರಯಾಣ ವೆಚ್ಚ
3. 75 ಸಾವಿರವರೆಗೆ ಅಂತಾರಾಷ್ಟ್ರೀಯ ಸಾಗಾಣಿಕೆ ವೆಚ್ಚ
4. ಭಾರತ ದೇಶದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಭಾರತೀಯ ರೈಲ್ವೆ ಮೂಲಕ ಸಾಗಾಣಿಕೆ ಮಾಡಿದರೆ, ಸಾಗಾಣಿಕೆ ವೆಚ್ಚದ ಮೇಲೆ 45% ರಿಯಾಯಿತಿ.
5. ದೇಶದ ವಿವಿಧ 14 ಬ್ಯಾಂಕ್‌ಗಳ ಮೂಲಕ ಪಡೆಯುವ ಸಾಲ ಸೌಲಭ್ಯಕ್ಕೆ ಬಡ್ಡಿದರದಲ್ಲಿ 0.5%ರಿಂದ 2% ವರೆಗೆ ಕಡಿತ
6. ಸಾಲ ಸೌಲಭ್ಯಗಳ ಸಂಸ್ಕಾರಣ ಶುಲ್ಕಗಳ ಮೇಲೆ 25 ರಿಂದ 50% ವರೆಗೆ ರಿಯಾಯಿತಿ, ಹಾಗೂ ಇತರೆ ಸೌಲಭ್ಯಗಳು

ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉದ್ಯಮಗಳ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಟಿಫಿಕೇಟ್ ಪ್ರಕ್ರಿಯೆಯನ್ನು ಗ್ಲೋಬಲ್ ರಿಸರ್ಚ್‌ ಫೌಂಡೇಶನ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಲಿದೆ. ಉದ್ದಿಮೆದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಈ ಯೋಜನೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಉದ್ಯಮಗಳ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಟಿಫಿಕೇಟ್ ನೋಂದಣಿ ಮಾಡುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸೂರ್ಯನಾರಾಯಣ ಓಟೆಪಡ್ಪು – 9380697120

- Advertisement -

Related news

error: Content is protected !!