
ಈ ಬಾರಿಯ ದಸರಾ ಹಬ್ಬ ಸ್ಯಾಂಡಲ್ವುಡ್ ಪಾಲಿಗೆ ಅಗ್ನಿ ಪರೀಕ್ಷೆ.. ಥಿಯೇಟರ್ ಕಡೆ ಪ್ರೇಕ್ಷಕರ ಪ್ರಭುಗಳನ್ನ ಕರೆತರೋ ಹರಸಾಹಸದಲ್ಲಿ ಚಿತ್ರರಂಗ ನಿಂತಿದೆ.. ಅದೇನೆ ಆಗ್ಲಿ ನಾವು ಪ್ರೇಕ್ಷಕರನ್ನ ಕರೆತಂದೇ ತರ್ತಿವಿ ಎಂದು ಶಪಥ ಮಾಡಿ ಮುಂದೆ ಬಂದಿವೆ ಸಲಗ ಮತ್ತು ಕೋಟಿಗೊಬ್ಬ-3 ಸಿನಿಮಾ..
ಕೊರೊನಾ ಎರಡನೇ ಲಾಕ್ ಡೌನ್ ನಂತರ ಚಿತ್ರಮಂದಿರಗಳಿಗೆ ಪ್ರೇಕ್ಷಕ ಪ್ರಭುಗಳು ಬಂದು ಸಂಭ್ರಮಿಸೋ ಸಿನಿ ಸಂಪ್ರದಾಯ ಕಣ್ಮರೆಯಾಗಿದೆ.. 100 ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರ ಮತ್ತೆ ಆ ಸಂಭ್ರಮದ ದಿನಗಳನ್ನ ನಾವು ತರ್ತೀವಿ ಎಂದು ಕೋಟಿಗೊಬ್ಬ-3 ಮತ್ತು ಸಲಗ ಸಿನಿಮಾಗಳು ಮುಂದೆ ಬಂದಿವೆ.. ದಸರಾ ಹಬ್ಬದ ಪ್ರಯುಕ್ತವಾಗಿ ಇಂದು ಥಿಯೇಟರ್ನಲ್ಲಿ ದರ್ಬಾರ್ ಮಾಡಲು ಸಲಗ ಮತ್ತು ಕೋಟಿಗೊಬ್ಬ-3 ಸಿನಿಮಾಗಳು ರಿಲೀಸ್ ಆಗ್ತಿವೆ.

ಕೋಟಿಗೊಬ್ಬ-3 ಹಾಗೂ ಸಲಗ ಈ ಎರಡು ಸಿನಿಮಾಗಳಲ್ಲಿ ಮೊದಲು ಸಲಗ ಸಿನಿಮಾದ ವಿಶೇಷತೆಯನ್ನ ಮೊದಲು ಹೇಳಿ ಬಿಡ್ತೀವಿ ಕೇಳಿ.. ಕಳೆದ ಎರಡು ವರ್ಷದಿಂದ ಅದ್ಭುತ ಪ್ರಮೋಷನ್ ಮಾಡ್ತಾ ಪ್ರೇಕ್ಷಕರ ನೀರಿಕ್ಷೆಯ ಮಟ್ಟವನ್ನ ಕಾಪಾಡಿಕೊಂಡು ಬಂದಿದೆ ಸಲಗ ಸಿನಿಮಾ..
ಇಂದು ರಾಜ್ಯಾದ್ಯಂತ ಸಲಗ ಸಿನಿಮಾ 300ಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್ ಆಗ್ತಿದೆ.. ಒಂದೇ ದಿನಕ್ಕೆ 1200 ಕ್ಕೂ ಹೆಚ್ಚು ಶೋಗಳನ್ನ ರಾಜ್ಯಾದ್ಯಂತ ನೀಡಬೇಕು ಅನ್ನೋದು ಸಲಗ ಸಿನಿಮಾ ಬಳಗದ ಗುರಿ.

ಕೋಟಿಗೊಬ್ಬ-3 ಸಿನಿಮಾ ತಂಡದ ಕಥೆ ಇದಕ್ಕಿಂತ ಏನು ಭಿನ್ನವಾಗಿಲ್ಲ.. ಕಿಚ್ಚ ಸುದೀಪ್ ಅಭಿನಯದಲ್ಲಿ ಶಿವಕಾರ್ತಿಕ್ ನಿರ್ದೇಶನದಲ್ಲಿ ಮೂರನೇ ಕೋಟಿಗೊಬ್ಬ ಸಿನಿಮಾ ಮೂಡಿಬರುತ್ತಿದೆ.. ಈಗಾಗಲೇ ಸಿನಿಮಾ ಹಾಡು ಟೀಸರ್ ಟ್ರೈಲರ್ ಮತ್ತು ಮೇಕಿಂಗ್ಸ್ ಚಿತ್ರಪ್ರೇಮಿಗಳ ಕುತೂಹವನ್ನ ಕೆರಳಿಸಿದೆ..
ಸಲಗ ಮತ್ತು ಕೋಟಿಗೊಬ್ಬ-3 ; ಈ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾವನ್ನ ಪ್ರೇಕ್ಷಕ ಕೈ ಹಿಡಿದು ಕಾಪಾಡುತ್ತಾನೆ ಕಾದು ನೋಡಬೇಕು..











