Monday, July 7, 2025
spot_imgspot_img
spot_imgspot_img

ಉಕ್ರೇನ್​​​ನಲ್ಲಿ ಸಿಲುಕಿರೋ ವಿದ್ಯಾರ್ಥಿಗಳ ನೆರವಿಗೆ ನಿಂತ ಕೇಂದ್ರ

- Advertisement -
- Advertisement -

ನವದೆಹಲಿ: ಉಕ್ರೇನ್​ ವಿರುದ್ಧ ರಷ್ಯಾ ಘೋಷಣೆ ಮಾಡಿರೋ ಯುದ್ಧ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಈಗಾಗಲೇ ಉಕ್ರೇನ್​​​ನ ರಾಜಧಾನಿ ಕೈವ್ ಕಾಲಿಟ್ಟಿರೋ ರಷ್ಯಾ ಸೇನೆ ನಿರಂತರ ದಾಳಿಯನ್ನು ಮುಂದುವರಿಸಿದೆ. ಈ ನಡುವೆ ದೇಶದ ರಕ್ಷಣೆಗಾಗಿ ಅಲ್ಲಿನ ಸರ್ಕಾರ ಉಕ್ರೇನ್​ ನಾಗರೀಕರಿಗೆ ರೈಫಲ್​ಗಳನ್ನು ನೀಡಿದ್ದು, ರಷ್ಯಾ ದಾಳಿಗೆ ತಿರುಗೇಟು ನೀಡಲು ಪ್ರಯತ್ನಿಸುತ್ತಿದೆ. ಈ ಹೋರಾಟದಲ್ಲಿ ಈಗಾಗಲೇ ಉಕ್ರೇನ್​​ನ 137ಕ್ಕೂ ಹೆಚ್ಚು ನಾಗಕರೀಕರು ಸಾವನ್ನಪ್ಪಿದ್ದಾರೆ.

vtv vitla
vtv vitla

ಈ ನಡುವೆ ಉಕ್ರೇನ್​​​ ತನ್ನ ವಾಯುನೆಲೆಯನ್ನು ನಿರ್ಬಂಧ ಮಾಡಿದ್ದು, ಯಾವುದೇ ನಾಗರಿಕ ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ. ಆದ್ದರಿಂದ ಭಾರತೀಯ ರಕ್ಷಣೆಗೆ ತೆರಳಿದ್ದ ಏರ್​ಇಂಡಿಯಾ ವಿಮಾನ, ಅರ್ಧದಲ್ಲೇ ವಾಪಸ್ ಆಗಿದೆ. ಈ ಹಿನ್ನೆಲೆಯಲ್ಲಿ ಭೂ ಮಾರ್ಗದ ಮೂಲಕ ಭಾರತೀಯರನ್ನು ರಕ್ಷಣೆ ಮಾಡಲು ವಿದೇಶಾಂಗ ಇಲಾಖೆ ಯೋಜನೆ ರೂಪಿಸಿದ್ದು, ಉಕ್ರೇನ್​ ಗಡಿ ಹಂಚಿಕೊಂಡಿರುವ ಇತರೇ ದೇಶಗಳ ಗಡಿಗಳ ಬಳಿಗೆ ಭಾರತ ವಿದೇಶಾಂಗ ಇಲಾಖೆಯ ಅಧಿಕಾರಿಗಳ ತಂಡಗಳು ಧವಿಸಿದೆ.

ಪ್ರಮುಖವಾಗಿ ಭಾರತೀಯ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಪ್ರತಿದಿನ ರೊಮೇನಿಯಾಗೆ ನಾಲ್ಕು ಬಸ್ಸುಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದ್ದು, ಅಲ್ಲಿಂದ ರಕ್ಷಣೆ ಮಾಡಿದವರನ್ನು ವಿಮಾನ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗುತ್ತದೆ. ಉಳಿದಂತೆ ಭಾರತೀಯರ ಸ್ಥಳಾಂತರಿವ ಕಾರ್ಯಕ್ಕೆ ನೆರವಿಗೆ ಬರಲು ವಿದೇಶಾಂಗ ಇಲಾಖೆಯ ತಂಡಗಳು ಹಂಗೇರಿ, ಪೋಲೆಂಡ್, ಸ್ಲೋವಾಕ್ ರಿಪಬ್ಲಿಕ್ ಮತ್ತು ರೊಮೇನಿಯಾದ ಮಾನ ಟೇಕ್ ಆಫ್ ಆಗಲು ಸಿದ್ಧತೆ ನಡೆದಿದ್ದು, ಸುಮಾರು 1000-1500 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ವಿಮಾನಗಳು ಹಾರಲು ತಯಾರಿ ನಡೆದಿದೆ. ಭಾರತೀಯರ ಕರೆತರುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಇನ್ನು, ಭೀತಿಯಲ್ಲಿರೋ ವಿದ್ಯಾರ್ಥಿಗಳಿಗೆ ಬಂಕರ್​, ಮೆಟ್ರೋ ಸ್ಟೇಷನ್​​ ಗಳಲ್ಲಿ ರಕ್ಷಣೆ ಪಡೆಯಲು ಅಲ್ಲಿನ ಸರ್ಕಾರ ಸೂಚನೆ ನೀಡಿದೆ. ಆದರೆ ಹಲವು ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ನೀರು, ಆಹಾರ ಸಮಸ್ಯೆ ಎದುರಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇತ್ತ ದೇಶದಲ್ಲಿರೋ ಮಕ್ಕಳ ಪೋಷಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿ ಸರ್ಕಾರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡ್ತಿದ್ದಾರೆ.

- Advertisement -

Related news

error: Content is protected !!