
ಬೆಂಗಳೂರು: ನೈಜೀರಿಯನ್ ಪ್ರಜೆಗಳ ಬೆನ್ನಲ್ಲೇ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಉಗಾಂಡ ಯುವತಿಯರ ಪುಂಡಾಟ ಶುರುವಾಗಿದ್ದು ಕ್ಯಾಬ್ ಚಾಲಕನ ಜೊತೆ ಅಶ್ಲೀಲವಾಗಿ ವರ್ತಿಸಿ ವಿಕೃತಿ ಮೆರೆದು ಚಪ್ಪಲಿಯಿಂದ ಥಳಿಸಿದ ಆರೋಪ ಕೇಳಿ ಬಂದಿದೆ.
ರಾಜಾಜಿನಗರದ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾಲೇಜು ಕಾರ್ಯಕ್ರಮ ನಿಮಿತ್ತ ಹೋಟೆಲ್ ಗೆ ಬಂದಿದ್ದ ಉಗಾಂಡದ ಯುವತಿಯರು ಕಾರ್ಯಕ್ರಮ ಮುಗಿಸಿ ಹೊರಡುವಾಗ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಓಟಿಪಿ ಪಡೆದು ನಾಲ್ವರನ್ನು ಕೂರಿಸಿಕೊಂಡು ಹೊರಟಿದ್ದಾನೆ.

ಅಷ್ಟರಲ್ಲಿ ಮತ್ತೊಬ್ಬ ಬಂದು ಕ್ಯಾಬ್ ಹತ್ತಲು ಮುಂದಾಗಿದ್ದಾನೆ.ಈ ವೇಳೆ ಕ್ಯಾಬ್ ಹತ್ತಲು ನಿರಾಕರಿಸಿದ ಚಾಲಕ ಐವರನ್ನು ಕರೆದುಕೊಂಡು ಹೋಗಲು ಆಗೋದಿಲ್ಲ ನಾಲ್ಕು ಜನರಾದರೆ ಬನ್ನಿ ಎಂದಿದ್ದಾನೆ.ಈ ವೇಳೆ ಟ್ರಿಪ್ ಕ್ಯಾನ್ಸಲ್ ಮಾಡಿದ ಯುವತಿಯರು ಕ್ಯಾನ್ಸ್ಲೇಷನ್ ಚಾರ್ಜ್ ಕೊಡಿ ಎಂದಾಗ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕಾಗಿ ಚಾಲಕನ ಜೊತೆ ಜಗಳಕ್ಕಿಳಿದ ಯುವತಿಯರು ಚಾಲಕನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಜೊತೆಗೆ ಖಾಸಗಿ ಅಂಗಾಗ ಪ್ರದರ್ಶನ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಕ್ಯಾಬ್ ಚಾಲಕ ಸಾಗರ್ ಸುಬ್ರಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಸಿದ್ದು ಉಗಾಂಡಾ ಪ್ರಜೆ ರೇಮಂಡ್, ಲುಬೆಗಾರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.












