Wednesday, June 24, 2026
spot_imgspot_img
spot_imgspot_img

ಉಡುಪಿ: ಹೂಡೆ ಬೀಚ್ ನಲ್ಲಿ ನೀರಿನ ಸೆಳತಕ್ಕೆ ಸಮುದ್ರಪಾಲದ ಮೂವರು ವಿದ್ಯಾರ್ಥಿಗಳು

- Advertisement -
- Advertisement -

ಮಲ್ಪೆ: ಹೂಡೆಯ ಸಮುದ್ರ ತೀರದಲ್ಲಿ ನೀರಿನ ಸೆಳತಕ್ಕೆ ಮೂವರು ಮಣಿಪಾಲ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲದ ಘಟನೆ ಇಂದು ಸಂಜೆ ನಡೆದಿದೆ.

ಸುಮಾರು 15 ಮಣಿಪಾಲದ ಎಂಐಟಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದ‌ ತಂಡವು ಇಂದು ಹೂಡೆಯ ಸಮುದ್ರ ತೀರದಲ್ಲಿ ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದ ಸಂದರ್ಭದಲ್ಲಿ ಅಲೆಯ ರಭಸಕ್ಕೆ ಮೂವರು ಕೊಚ್ಚಿ ಹೋಗಿದ್ದರು.

ಈ ಮಾಹಿತಿ ತಿಳಿದ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ ಎಂದು‌ ತಿಳಿದು‌ ಬಂದಿದೆ. ಬೆಂಗಳೂರಿನ ನಿಶಾಂತ್ ಹಾಗೂ ಷಣ್ಮುಗ ಅವರನ್ನು ರಕ್ಷಿಸಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಸಮುದ್ರ ಪಾಲಾದ ವಿದ್ಯಾರ್ಥಿ ಹೈದಾರಬಾದಿನ ಶ್ರೀಕರ ಇನ್ನೂ ಪತ್ತೆಯಾಗಿಲ್ಲ‌ ಹುಡುಕಾಟ ಮುಂದುವರಿದೆ.

- Advertisement -

Related news

error: Content is protected !!