Sunday, June 7, 2026
spot_imgspot_img
spot_imgspot_img

ಉಪ್ಪಿನಂಗಡಿ: ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಅಪಘಾತ; ತಾಯಿ – ಮಗನಿಗೆ ಗಾಯ

- Advertisement -
- Advertisement -

ಉಪ್ಪಿನಂಗಡಿ: ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ತಾಯಿ- ಮಗ ಗಾಯಗೊಂಡ ಘಟನೆ ಕಾಂಚನ – ಶಾಂತಿನಗರ ರಸ್ತೆಯ ಗೋಳಿತ್ತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ನಡೆದಿದೆ.

ನೂಜೋಲು ನಿವಾಸಿ ಕುಶಾಲಪ್ಪ ಹಾಗೂ ಅವರ ತಾಯಿ ಉಪ್ಪಿನಂಗಡಿಯಿಂದ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಟಿಪ್ಪರ್ ಅಡಿಗೆ ಬಿದ್ದಿದ್ದ ಕುಶಾಲಪ್ಪ ಹಾಗೂ ಅವರ ತಾಯಿಯನ್ನು ಕಷ್ಟಪಟ್ಟು ಹೊರ ತೆಗೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ.

- Advertisement -

Related news

error: Content is protected !!