Wednesday, September 9, 2026
spot_imgspot_img
spot_imgspot_img

ಉಳ್ಳಾಲ: ಬೆಂಗಳೂರು ಮೂಲದ ಯುವಕನ ಮೃತದೇಹ ತೊಕ್ಕೊಟ್ಟು ಬಾವಿಯಲ್ಲಿ ಪತ್ತೆ

- Advertisement -
- Advertisement -

ಉಳ್ಳಾಲ: ಬೆಂಗಳೂರು ಮೂಲದ ಯುವಕನ ಮೃತದೇಹ ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಪೊಲೀಸರು , ಅಗ್ನಿಶಾಮಕ ದಳದ ಸಹಕಾರದಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ. ಘಟನೆ ಕಾರಣ ತಿಳಿದುಬಂದಿಲ್ಲ.

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಮಹಂತೇಶ್ ಎ.ಎಸ್ (36) ಮೃತ ಯುವಕ.

ನ.30 ರಂದು ಬೆಂಗಳೂರಿನಿಂದ ತೊಕ್ಕೊಟ್ಟುಗೆ ಬಂದಿದ್ದ ಮಹಾಂತೇಶ್ ರಾ.ಹೆ.66 ರಲ್ಲಿರುವ ಕಾಪಿಕಾಡಿನ ನಿರ್ವಿಕಲ್ಪ ಲಾಡ್ಜ್ ನಲ್ಲಿ ತಂಗಿದ್ದರು. ಅಂದು ರಾತ್ರಿ ಲಾಡ್ಜ್ ನಿಂದ ತೆರಳಿದವರು ವಾಪಸ್ಸಾಗಿರಲಿಲ್ಲ. ಡಿ. 1 ರಂದು ಸಂಜೆ ಲಾಡ್ಜ್ ರೂಮಿನ ಅವಧಿ ಮುಗಿದ ಹಿನ್ನೆಲೆ ರೂಮ್ ಬಾಯ್ ರೂಮಿಗೆ ಬಂದು ತಪಾಸಣೆ ನಡೆಸಿದಾಗ ಮಹಾಂತೇಶ್ ಇರಲಿಲ್ಲ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ನ.2 ರಂದು ಬೆಂಗಳೂರಿನ ಮಹಾಂತೇಶ್ ಸಹೋದರಿ ಉಳ್ಳಾಲ ಠಾಣೆಯಲ್ಲಿ ಸಹೋದರ ನಾಪತ್ತೆ ಕುರಿತು ದೂರು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನದ ವೇಳೆಗೆ ಅಂಬಿಕಾ ರೋಡ್ ಹೆದ್ದಾರಿ ಅಂಚಿನಲ್ಲಿರುವ ಅಬ್ದುಲ್ ಸಮದ್ ಎಂಬವರ ಮನೆಯ ಹಿಂದಿನ ಬಾವಿಯಲ್ಲಿ ಮಹಂತೇಶ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮದ್ ಮನೆ ಕೆಲಸದಾಕೆ ಸುಗಂಧಿ ಎಂಬವರು ಬಾವಿಯೊಳಗೆ ದುರ್ವಾಸನೆ ಬರುತ್ತಿರುವುದನ್ನ ಗ್ರಹಿಸಿ ಬಾವಿ ನೋಡಿದಾಗ ಅಪರಿಚಿತ ವ್ಯಕ್ತಿಯ ಶವ ಕಂಡಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಕೊಳೆತ ಶವವನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!