Monday, August 31, 2026
spot_imgspot_img
spot_imgspot_img

ಐಪಿಎಲ್ ಬೆಟ್ಟಿಂಗ್ ಅಡ್ಡೆಗೆ ಪೊಲೀಸ್ ದಾಳಿ; ಕಾಲ್ಕಿತ್ತವ ಸೇರಿದ್ದು ಮಸಣ

- Advertisement -
- Advertisement -
vtv vitla
vtv vitla

ಗ್ರಾಮೀಣ ಪ್ರದೇಶಗಳಲ್ಲಿ ಐಪಿಎಲ್ ಬೆಟ್ಟಿಂಗ್ ಬಲು ಜೋರಾಗಿದೆ. ಬೆಟ್ಟಿಂಗ್ ಸ್ಪಾಟ್ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.

ರಾಯಚೂರು ತಾಲೂಕಿನ ವಡವಾಟಿಯಲ್ಲಿ ಸ್ವಾಮಿ(35) ಎಂಬ ವ್ಯಕ್ತ ಸಾವನ್ನಪ್ಪಿದ್ದಾನೆ. ವಡವಾಟಿ ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಹಿನ್ನೆಲೆ ಗ್ರಾಮದ ಮೇಲೆ ಯರಗೇರಾ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸ್ವಾಮಿ ಮೃತಪಟ್ಟಿದ್ದಾನೆ. ಸ್ವಾಮಿ ಸಾವಿಗೆ ಪಿಎಸ್‌ಐ ಅಂಬರೀಶ್ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಸ್ವಾಮಿಗೆ ಕ್ರಿಕೆಟ್ ಬೆಟ್ಟಿಂಗ್ ಅಂದ್ರೆ ಏನೆಂಬುದೇ ಗೊತ್ತಿಲ್ಲ. ನನ್ನ ಪೊಲೀಸರು ಎಲ್ಲಿ ಬಂಧಿಸುತ್ತಾರೋ ಎಂದು ಹೆದರಿ ಓಡಿದ್ದಾನೆ. ಈ ವೇಳೆ ಎಡವಿಬಿದ್ದು ಸ್ವಾಮಿ ಮೃತಪಟ್ಟಿದ್ದಾನೆಂದು ಮೃತ ಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

- Advertisement -

Related news

error: Content is protected !!