Tuesday, June 23, 2026
spot_imgspot_img
spot_imgspot_img

ಒಂದೂವರೆ ತಿಂಗಳ ಹಿಂದಷ್ಟೇ ಗಂಡ ಆತ್ಮಹತ್ಯೆ; ಅದೇ ನೋವಿನಲ್ಲಿ ಗಂಡನ ಹಾದಿಯನ್ನೇ ಅನುಕರಿಸಿದ ಪತ್ನಿ – ಒಂದೂವರೆ ವರ್ಷದ ಮಗು ಅನಾಥ

- Advertisement -
- Advertisement -

ಒಂದೂವರೆ ತಿಂಗಳಿನ ಹಿಂದೆಯಷ್ಟೇ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ನೊಂದ ಹೆಂಡತಿ ಗಂಡನ ಹಾದಿಯನ್ನೇ ಹಿಡಿದಿದ್ದಾಳೆ. ಇದರಿಂದ ಒಂದೂವರೆ ವರ್ಷದ ಕಂದಮ್ಮ ಅನಾಥವಾಗಿದೆ.

ಈ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಕಾಡುಗೋಡಿಯ ಓಫಾರಂ ಬಳಿ ನಡೆದಿದೆ. ಸೌಂದರ್ಯ (24) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.

ಈಕೆಯ ಗಂಡ ಧನಂಜಯ್ ಒಂದೂವರೆ ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಮಾಗಡಿ ರೋಡ್ ನಲ್ಲಿರುವ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ ಸೌಂದರ್ಯ ತವರು ಮನೆಯಲ್ಲಿದ್ದರು. ಗಂಡನ ಸಾವಿನ ನೋವಿನಿಂದ ಹೊರಬರಲಾಗದೆ ಸೌಂದರ್ಯ ಖಿನ್ನತೆಯಿಂದ ಬಳಲುತ್ತಿದ್ದರು. ಮಧ್ಯಾಹ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!