- Advertisement -
- Advertisement -
ಕಲ್ಲಡ್ಕ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾ ವತಿಯಿಂದ ಭತ್ತದ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಗೋಳ್ತಮಜಲು ಗ್ರಾಮದ ನೆಟ್ಲ ಪಿಲಿಂಜ ಸುರೇಶ್ ರವರ ಗದ್ದೆಯಲ್ಲಿ ಮತ್ತು ವೀರಕಂಭ ಗ್ರಾಮದ ಮೈರ ಕೂಸಮ್ಮ ವಾಸಪ್ಪ ಗೌಡರವರ ಗದ್ದೆಯಲ್ಲಿ ನೇಜಿ ನಾಟಿ ಮಾಡಲಾಯಿತು.


ಈ ಕಾರ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಮತ್ತು ಬಂಟ್ವಾಳ ಮೋರ್ಚಾದ ಪ್ರಭಾರಿ ಆಶಾ.ಡಿ.ಸಿಲ್ವಾ, ಜಿಲ್ಲಾ ಸದಸ್ಯೆ ರೂಪ ಶೆಟ್ಟಿ ,ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಕಮಲಾಕ್ಷಿ ಪೂಜಾರಿ, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ, ಬಂಟ್ವಾಳ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಲಕಿತ ಆರ್ ಶೆಟ್ಟಿ, ಸೀಮಾ ಮಾಧವ, ಬಾಳ್ತಿಲ ಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ, ವೀರಕಂಭ ಪಂಚಾಯತ್ ಅಧ್ಯಕ್ಷ ದಿನೇಶ್, ಮೋರ್ಚಾದ ಪದಾಧಿಕಾರಿಗಳು, ಸದಸ್ಯರು, ಪಂಚಾಯತ್ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.




- Advertisement -








