Monday, September 28, 2026
spot_imgspot_img
spot_imgspot_img

ಕಾರ್ಕಳ: ಕರ್ತವ್ಯಕ್ಕೆ ಅಡ್ಡಪಡಿಸಿ ಜೀವಬೆದರಿಕೆ; ಕೇಸು ದಾಖಲು

- Advertisement -
- Advertisement -
vtv vitla
vtv vitla

ಕಾರ್ಕಳ: ಪಳ್ಳಿ ಗ್ರಾಮದಲ್ಲಿ ಗ್ರಾಮಕರಣಿಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ತೂರು ಬಲ್ಬಾಡಿನ ಶ್ರೀನಿವಾಸ.ಕೆ(46) ಎಂಬವರಿಗೆ ಆರೋಪಿಗಳಿಬ್ಬರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವಬೆದರಿಕೆಯೊಡ್ಡಿರುವ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಳ್ಳಿ ಗ್ರಾಮದ ಸತೀಶ್ ಸಾಲಿಯಾನ್ ಹಾಗೂ ಅಪರಿಚಿತ ಮತ್ತೊಬ್ಬ ವ್ಯಕ್ತಿ ಪ್ರಕರಣದ ಆರೋಪಿತರು.

vtv vitla
vtv vitla

ಆರೋಪಿ ಸತೀಶ್ ಸಾಲಿಯಾನ್‌ಗೆ ಎಂಎಜಿ ಟಿಎಎಕ್ಸ್ ಸಿಆರ್.58/2021.22ರಂತೆ ಜಪ್ತಿಯಾದ ಹರಾಜು ಬಗೆಗಿನ ನೋಟಿಸನ್ನು ಜಾರಿಗೊಳಿಸುವ ಬಗ್ಗೆ ಗ್ರಾಮ ಸಹಾಯಕರು ಸ್ಥಳಕ್ಕೆ ಹೋದಾಗ ನೋಟೀಸನ್ನು ತಿರಸ್ಕರಿಸಿದಲ್ಲದೇ ಗ್ರಾಮಕರಣಿಕರು ಹರಾಜು ಮಾಡುವ ಸ್ವತ್ತಿನ ಮೇಲೆ ಪ್ರಚಾರ ಪಡಿಸಿದ್ದ ನೋಟಿಸನ್ನು ಹರಿದು ಎಸೆಯಲಾಗಿತ್ತು. ಅದೇ ದಿನ ಸಂಜೆ ಕರೆ ಮಾಡಿ, ಜೀವಬೆದರಿಕೆಯೊಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.

ಗ್ರಾಮಕರಣಿಕ ಶ್ರೀನಿವಾಸ ಡಿಸೆಂಬರ್ 13 ರಂದು ಬೆಳಿಗ್ಗೆ ಕಛೇರಿಯಲ್ಲಿ ಪಿಂಚಣಿದಾರರ ಭೌತಿಕ ಪರಿಶೀಲನೆ ಕರ್ತವ್ಯ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಸತೀಶ್ ಸಾಲಿಯಾನ್ ಇನ್ನೊಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಕಛೇರಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

vtv vitla
vtv vitla
vtv vitla
- Advertisement -

Related news

error: Content is protected !!