Thursday, August 20, 2026
spot_imgspot_img
spot_imgspot_img

ಕಾಸರಗೋಡು: ಆಟೋ-ಸ್ಕೂಟರ್ ನಡುವೆ ಅಪಘಾತ; ಯುವಕ ದಾರುಣ ಸಾವು

- Advertisement -
- Advertisement -

ಕಾಸರಗೋಡು: ಆಟೋರಿಕ್ಷಾ ಮತ್ತು ಸ್ಕೂಟರ್ ನಡುವೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ರವಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಪಂಜಿಗುಡ್ಡೆಯಲ್ಲಿ ನಡೆದಿದೆ.

ಮುಟ್ಟತ್ತೋಡಿ ಕೋಪೆ ಹಿದಾಯತ್ ನಗರದ ಮುಹಮ್ಮದ್ ಅಶ್ರಫ್(27) ಮೃತಪಟ್ಟವರು. ಜುಲೈ 17ರಂದು ಇವರ ವಿವಾಹ ನಿಗಧಿಯಾಗಿತ್ತು. ಶನಿವಾರವಷ್ಟೇ ಗಲ್ಫ್ ನಿಂದ ಊರಿಗೆ ಬಂದಿದ್ದರು.

ಸಹಸವಾರ ಅಶ್ರಫ್ ನ ಸಹೋದರ ಇರ್ಫಾನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈದುಲ್ ಫಿತ್ರ್ ಹಬ್ಬದಂಗವಾಗಿ ಸಂಜೆ ಪಂಜಿಗುಡ್ಡೆ ಯಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ತಲಪಿಸಿದರೂ ಅಶ್ರಫ್ ಮೃತಪಟ್ಟರು.

ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!