Friday, June 27, 2025
spot_imgspot_img
spot_imgspot_img

ಕಾಸರಗೋಡು: ಇಬ್ಬರು ಮಕ್ಕಳ ತಾಯಿ ಆಟೋರಿಕ್ಷಾ ಚಾಲಕನೊಂದಿಗೆ ಪರಾರಿ

- Advertisement -
- Advertisement -
vtv vitla

ಕಾಸರಗೋಡು: ಇಬ್ಬರು ಮಕ್ಕಳ ತಾಯಿ ಆಟೋರಿಕ್ಷಾ ಚಾಲಕನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಪತಿ ನೀಡಿದ ದೂರಿನ ಮೇರೆಗೆ ಮೇಲ್ಪರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಿಸ್ರಿಯಾ ನಾಪತ್ತೆಯಾದ ಮಹಿಳೆ.

ಪತಿಯ ದೂರಿನ ಪ್ರಕಾರ ಆಕೆಯ ಆರು ವರ್ಷದ ಮಗಳನ್ನೂ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಸ್ಥಳೀಯ ನಿವಾಸಿಯಾಗಿರುವ ನಾಸರ್‌ (43) ಆಟೋ ಚಾಲಕನಾಗಿದ್ದು ಪ್ರತಿನಿತ್ಯ ಮಿಸ್ರಿಯಾ ಅವಳೊಂದಿಗೆ ಸಲುಗೆ ಗಿಟ್ಟಿಸಿಕೊಂಡಿದ್ದಾನೆ. ನಂತರ ಸಲುಗೆ ಪ್ರೇಮ ಪ್ರಕರಣಕ್ಕೆ ತಿರುಗಿದೆ ಎನ್ನಲಾಗಿದೆ. ಮಾ. 13 ರಂದು ರಾತ್ರಿ ಮಹಿಳೆ ಹಾಗೂ ಆಕೆಯ ಮಗಳು ನಾಪತ್ತೆಯಾಗಿದ್ದರು.

ಮಿಜ್ರಿಯಾ 12 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳ ತಾಯಿ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಿಜ್ರಿಯಾ ನಾಸರ್ ಜೊತೆ ಹೋಗಿರುವುದು ಪತ್ತೆಯಾಗಿದೆ.

- Advertisement -

Related news

error: Content is protected !!