

ಆಮೀಷಕ್ಕೆ ಒಳಗಾಗಿ ಯುವತಿಯರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಲವ್ ಜಿಹಾದ್ಗೆ ಒಳಗಾಗಿ ಎಲ್ಲೋ ಹೋಗಿ ಏನಾದರೂ ಎಂಬುವುದೇ ಗೊತ್ತಾಗುತ್ತಿಲ್ಲ. ಲವ್ ಜಿಹಾದ್ಗೆ ಬಲಿಯಾಗಿ ಐಸಿಸ್ಗೆ ಸೇರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಯೂ ಇದೆ. ಇದಕ್ಕೆ ನಿದರ್ಶನ ಎಂಬಂತೆ ಮಂಗಳೂರಿನಲ್ಲಿ ಮಾಜಿ ಶಾಸಕ ಇದಿನಬ್ಬ ಮನೆಗೆ ಎನ್ಐಎ ದಾಳಿ ನಡೆಸಿತ್ತು. ಈ ವೇಳೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಮ್ಮಳಿಗೆ ಉಗ್ರರ ನಂಟಿರುವುದು ಸ್ಪಷ್ಟವಾಗಿದೆ. ಅಂತೆಯೇ ಉದ್ಯೋಗದ ನೆಪ ತೋರಿಸಿ ಯುವತಿಯರನ್ನು ಐಸಿಸ್ಗೆ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ.
ವಿದೇಶದಲ್ಲಿ ಮನೆ ಕೆಲಸದ ಆಮೀಷ ತೋರಿಸಿ ಕಾಸರಗೋಡು ಜಿಲ್ಲೆಯ ಯುವತಿಯರನ್ನು ಕರೆದೊಯ್ದು, ಬಳಿಕ ಅವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ಗೆ ಹಸ್ತಾಂತರಿಸುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ಕ್ಕೆ ಮಾಹಿತಿ ಲಭಿಸಿದೆ. ಈ ಬಗ್ಗೆ ಎನ್.ಐ.ಎ ತನಿಖೆ ಆರಂಭಿಸಿದೆ ಎನ್ನಲಾಗಿದೆ.

ಗಲ್ಪ್ ರಾಷ್ಟ್ರ ಕೇಂದ್ರೀಕರಿಸಿ ಯುವತಿಯರನ್ನು ಮನೆಕೆಲಸಗಳಿಗೆ ರವಾನಿಸಲು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎನ್ಐಎಗೆ ಮಾಹಿತಿ ಲಭಿಸಿದೆ. ಈತನ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಬಲೆ ಬೀಸಿದೆ. ಎರ್ನಾಕುಳಂನ ನೇಮಕಾತಿ ಸಂಸ್ಥೆಯೊಂದು ಮಾವೇಲಿಕ್ಕರ ನಿವಾಸಿ ಯುವತಿಯನ್ನು ಕುವೈತ್ಗೆ ಕಳುಹಿಸಿದ್ದು, ಅಲ್ಲಿಂದ ಆಕೆಯನ್ನು ಸಿರಿಯಾಕ್ಕೆ ರವಾನಿಸಿದೆ. ತಂಡದ ವಶದಲ್ಲಿದ್ದ ಈ ಯುವತಿ ತಪ್ಪಿಸಿಕೊಂಡು ಊರಿಗೆ ಬಂದಿದ್ದು, ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾಳೆ.
ದೇಶದಲ್ಲಿ ಮನೆಕೆಲಸಕ್ಕೆ ಯುವತಿಯರು ಬೇಕಾಗಿದ್ದು, 50 ಸಾವಿರ ರೂ.ವರೆಗೆ ವೇತನ ನೀಡುವುದಾಗಿ ಜಾಹೀರಾತು ನೀಡುತ್ತಾರೆ. ಗಲ್ಪ್ ರಾಷ್ಟ್ರಕ್ಕೆ ಯುವತಿಯರು ತಲುಪುತ್ತಿದ್ದಂತೆ ಅವರನ್ನು 10 ಲಕ್ಷ ರೂ.ಗೂ ಹೆಚ್ಚಿನ ಮೊತ್ತಕ್ಕೆ ಸಿರಿಯಾದ ಐಸಿಸ್ ಕೇಂದ್ರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಯುವತಿ ತಿಳಿಸಿದ್ದಾಳೆ. ಯುವತಿ ನೀಡಿದ ಮಾಹಿತಿ ಅನ್ವಯ ದೂರು ದಾಖಲಾಗಿದ್ದರೂ ಪ್ರಕರಣವನ್ನು ಎನ್ಐಎಗೆ ವಹಿಸದಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಈ ಕೃತ್ಯದಲ್ಲಿ ತಳಿಪರಂಬ ನಿವಾಸಿ ಮಜೀದ್ ಎಂಬಾತನ ಕೈವಾಡವಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದ್ದು, ಆತನ ಪತ್ತೆಗೆ ತನಿಖಾ ಏಜೆನ್ಸಿ ಕ್ರಮ ಕೈಗೊಂಡಿದೆ.
- ಕಾಸರಗೋಡು: ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿಬಿದ್ದ ಲಾರಿ; ಚಾಲಕ ಸಾವು
- ಪುತ್ತೂರು: ಪಿಕ್ಸೆಲ್ ಕ್ರಿಯೇಟಿವ್ಸ್ ನ ನೂತನ ಕಚೇರಿ ಉದ್ಘಾಟನಾ ಸಮಾರಂಭ
- ಕಡಬ: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ – ಓರ್ವ ಆರೋಪಿ ಹಾಗೂ 3 ವಾಹನಗಳು ವಶಕ್ಕೆ
- ವಿಟ್ಲದಲ್ಲಿ ಶುಭಾರಂಭಗೊಳ್ಳಲಿರುವ “ಯುವರ್ ಚಾಯ್ಸ್” ಲೋಟಸ್ ಪ್ರೊಫೆಷನಲ್ ವುಮೆನ್ ಸಲೂನ್ ನಲ್ಲಿ ಕೆಲಸಕ್ಕೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ
- ವಿಟ್ಲದಲ್ಲಿ ”ಯುವರ್ ಚಾಯ್ಸ್” ಲೋಟಸ್ ಪ್ರೊಫೆಷನಲ್ ವುಮೆನ್ ಸಲೂನ್ ಶುಭಾರಂಭ









