Friday, August 7, 2026
spot_imgspot_img
spot_imgspot_img

ಕಾಸರಗೋಡು: ಕಳೆದು ಹೋದ ಚಿನ್ನದ ಸರ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್

- Advertisement -
- Advertisement -

ಕಾಸರಗೋಡು: ಹುಡುಗಿಯೊಬ್ಬಳು ಬಸ್ಸಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಬಸ್ ಕಂಡಕ್ಟರ್ ಮತ್ತೆ ಅವರಿಗೆ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡಿನಿಂದ ಮಂಗಳೂರಿಗೆ ಬರುವ ಸರ್ಕಾರಿ ಬಸ್ಸಿನಲ್ಲಿ ಹುಡುಗಿಯ ಚಿನ್ನದ ಸರ ಕಳೆದು ಹೋಗಿತ್ತು. ಎಷ್ಟೋ ಹೊತ್ತಿನ ನಂತರ ಮನೆಗೆ ಬಂದು ಚಿನ್ನದ ಸರ ಕಳೆದು ಹೋಗಿರುವ ಬಗ್ಗೆ ತಿಳಿದು ತಕ್ಷಣ ಮನೆಯಲ್ಲಿ ಇರುವವರ ಗಮನಕ್ಕೆ ತಂದಿದ್ದರು. ಆ ಬಸ್ಸಿನ ಬಗ್ಗೆ ಡಿಪೋ ಮೇಲ್ವಿಚಾರಕರಲ್ಲಿ ವಿಚಾರಿಸಿದಾಗ ಬಸ್ಸಿನ ನಿರ್ವಾಹಕನಾದ ಮಂಜು ಇವರ ದೂರವಾಣಿ ಸಂಖ್ಯೆಯನ್ನು ನೀಡಿದ್ದರು.

ಇವರಿಗೆ ಕರೆ ಮಾಡಿ ಚಿನ್ನದ ಸರ ಕಳೆದು ಹೋಗಿರುವ ಬಗ್ಗೆ ಅವರಲ್ಲಿ ವಿಚಾರಿಸಿದಾಗ ತನ್ನ ಬಳಿ ಇದೆ ಎಂದು ಹೇಳಿ ತಾನು ಇರುವ ಮನೆಯ ವಿಳಾಸವನ್ನು ತಿಳಿಸಿದ್ದರು.ಚಿನ್ನದ ಸರವನ್ನು ಸಂಬಂಧಪಟ್ಟವರಿಗೆ ನೀಡಿದ್ದು ಇಂತಹ ಒಂದು ಪ್ರಶಂಸನೀಯ ಪ್ರಾಮಾಣಿಕತೆ ಕಂಡಕ್ಟರ್ ಇರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!