Thursday, September 10, 2026
spot_imgspot_img
spot_imgspot_img

ಕಾಸರಗೋಡು: ಮೀನು ಹಿಡಿಯುತ್ತಿದ್ದ ವೇಳೆ ಕಲ್ಲು ಬಂಡೆಯಿಂದ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು

- Advertisement -
- Advertisement -

ಕಾಸರಗೋಡು: ಮೀನು ಹಿಡಿಯುತ್ತಿದ್ದಾಗ ಕಲ್ಲು ಬಂಡೆಯಿಂದ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಬೇಕಲದಲ್ಲಿ ನಡೆದಿದೆ.

ಬೇಕಲ ಶಕ್ತಿನಗರದ ಝುಬೈರ್ ರವರ ಪುತ್ರ ಶುಹೈಬ್ (16) ಮೃತಪಟ್ಟವನು.

ಪಳ್ಳಿಕೆರೆ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದನು. ಬೆಳಿಗ್ಗೆ ತಂದೆ ಹಾಗೂ ಸಹೋದರನ ಜೊತೆ ಚಿಪ್ಪು ಮೀನು ಸಂಗ್ರಹಿಸಲು ಬೇಕಲ ಕಡಲ ಕಿನಾರೆಗೆ ತಲಪಿದ್ದು ಬಂಡೆ ಕಲ್ಲಿನೆಡೆಯಲ್ಲಿದ್ದ ಚಿಪ್ಪು ಮೀನು ಹೆಕ್ಕುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಮುದ್ರಪಾಲಾಗಿದ್ದನು.

ಬೇಕಲ ಪೊಲೀಸರು, ಕರಾವಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ನಡೆಸಿದ ಶೋಧದ ಬಳಿಕ ಮೃತದೇಹವನ್ನು ಮಧ್ಯಾಹ್ನದ ವೇಳೆಗೆ ಮೇಲಕ್ಕೆತ್ತಲಾಯಿತು.

- Advertisement -

Related news

error: Content is protected !!