Wednesday, June 24, 2026
spot_imgspot_img
spot_imgspot_img

ಕುಂಪಲ‌ ಶಿವಪುರ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಿಂದ ನೂತನ ಬಸ್ಸು ತಂಗುದಾನ‌ ನಿರ್ಮಾಣಕ್ಕೆ ಶಿಲಾನ್ಯಾಸ

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಕ್ಕೆ ಕುಂಪಲ‌ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದ ವತಿಯಿಂದ ಕುಂಪಲ‌ ಬೈಪಾಸ್ ರಾಷ್ಠ್ರೀಯ ಹೆದ್ದಾರಿ ಬದಿಯಲ್ಲಿ ನೂತನ ಬಸ್ಸು ತಂಗುದಾಣ ನಿರ್ಮಾಣಕ್ಕೆ ಧ್ವಜಾರೋಹಣ ನೆರವೇರಿಸಿ ಶಿಲಾನ್ಯಾಸ ನಡೆಯಿತು.

ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅರ್ಚಕ‌ ಗಂಗಾದರ ಶಾಂತಿ, ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ ಕುಂಪಲ, ಉದ್ಯಮಿ ಲಿಂಗಪ್ಪ ಕೊಲ್ಯ, ಸೋಮೇಶ್ವರ ಪುರಸಭೆ ಸದಸ್ಯ ದೀಪಕ್ ಪಿಲಾರ್, ಮಾಜಿ ಸದಸ್ಯ ಸತೀಶ್ ಉಳ್ಳಾಲ್, ನವಚೇತನ್ ಕ್ಲಬ್ ನ ಅಧ್ಯಕ್ಷ ಸಾಜಿದ್, ಬಾಲಕೃಷ್ಣ ಮಂದಿರ ರಜತ ಮಹೋತ್ಸವದ ಕಾರ್ಯಾದ್ಯಕ್ಷ ಜಗದೀಶ್ ಆಚಾರ್ಯ,

ಬಿಲ್ಲವ ಸೇವಾ ಸಂಘ ಕೊಲ್ಯದ ವೇಣುಗೋಪಾಲ್ ಕೊಲ್ಯ, ಈಶ್ವರ ಸುವರ್ಣ, ಪುರುಷೋತ್ತಮ ಅಡ್ಕ, ದುರ್ಗಾಪರಮೇಶ್ವರ ಸೇವಾ ಸಮಿತಿಯ ಗಂಗಾದರ‌ ಕುಜುಮಗದ್ದೆ, ಭಾಸ್ಕರ ಕುಜುಮಗದ್ದೆ, ಹರಿಶ್ಚಂದ್ರ ಕುಜುಮಗದ್ದೆ, ಲೀಲ ಬಾರ್ದೆ, ರೇವತಿ ವಿಶ್ವನಾಥ್, ಕೇಶವ ಕುಂಪಲ, ಶೇಖರ್ ಕುಂಪಲ, ಗೋಪಾಲಕೃಷ್ಣ ರಾವ್, ದೇವದಾಸ್ ಬಾರ್ದೆ ಮುಂತಾದವರು ಭಾಗವಹಿಸಿದ್ದರು.

ಪ್ರವೀಣ್ ಎಸ್ ಕುಂಪಲ‌ ಕಾರ್ಯಕ್ರಮ ನಿರೂಪಿಸಿ, ದೇವಸ್ಥಾನದ ಪ್ರದಾನ ಅರ್ಚಕ ಭವಾನಿಶಂಕರ ಶಾಂತಿ ವಂದಿಸಿದರು.

- Advertisement -

Related news

error: Content is protected !!