- Advertisement -
- Advertisement -
ಸಾಲಿಗ್ರಾಮ: ಭಾರಿ ಗಾಳಿ ಮಳೆಯಿಂದಾಗಿ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯಾದ ಘಟನೆ ಸಾಲಿಗ್ರಾಮ ಕಾರ್ಕಡ ಗ್ರಾಮದ ಉಮ್ಮಕ್ಕಿ ಬೈಲು ಎಂಬಲ್ಲಿ ನಡದಿದೆ.
ಉಮ್ಮಕ್ಕಿ ಬೈಲು ನಿವಾಸಿ ಪದ್ದು ಪೂಜಾರ್ತಿ ಎಂಬವರ ಮನೆ ಮೇಲೆ ರಸ್ತೆ ಬದಿಯ ಮರ ಬಿದ್ದು ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ತಾಯಿ ಮಗ ಊಟ ಮಾಡುತ್ತಿರುವಾಗ ಈ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ. ಮನೆಗೆ ಭಾಗಶಃ ಹಾನಿಯಾಗಿದ್ದು 50ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಘಟನ ಸ್ಥಳಕ್ಕೆ ಗ್ರಾಮ ಲೆಕ್ಕಿಗ ಮಹಿಂದ್ರ ಆಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -