ಬೆಂಗಳೂರು : ಕೊರೊನಾ ಮಹಾಮಾರಿಯ ಇಂದು ಒಂದೇ ದಿನ ಬರೋಬ್ಬರಿ 1373ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ದಾಖಲೆ ಬರೆದಿದ್ದು, 2228 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 31105 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಂದೇ ದಿನ ರಾಜ್ಯದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ.
ಮಂಗಳೂರು : ದ.ಕ ಜಿಲ್ಲೆಯಲ್ಲಿ ಇಂದು ಮತ್ತೊಮ್ಮೆ ಕೊರೋನಾ ಮಹಾ ಸ್ಪೋಟ.!ಇಂದು ಜಿಲ್ಲೆಯಲ್ಲಿ167 ಕೊರೊನಾ ಕೇಸ್ ಪತ್ತೆ. ಪ್ರಾಥಮಿಕ ಸಂಪರ್ಕದಿಂದ 64, ILI ಪ್ರಕರಣದಿಂದ 42, SARI ಪ್ರಕರಣ 6, ಸಂಪರ್ಕಕ್ಕೆ ಸಿಗದ 38 ಪ್ರಕರಣ, ಶಸ್ತ್ರಚಿಕಿತ್ಸೆ ಮಾಡೋ ಮೊದಲು 13 ಜನರಿಗೆ ಕೊರೋನಾ ಪಾಸಿಟಿವ್, ಅಂತರಾಷ್ಟ್ರೀಯ ಪ್ರಯಾಣದಿಂದ 3 ಮಂದಿಗೆ, ಅಂತರಾಜ್ಯ ಪ್ರಯಾಣ ದಿಂದ ಒರ್ವನಿಗೆ ಪಾಸಿಟಿವ್ ಪತ್ತೆ ಆಗಿದೆ. ಕಳೆದೊಂದು ವಾರದಿಂದ ಕೊರೋನಾಕ್ಕೆ ಸಾವನ್ನಪ್ಪುವವರ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದ.ಕ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 30ಕ್ಕೇರಿಕೆ ಆಗಿದೆ.ಜಿಲ್ಲೆಯಲ್ಲಿ ಇಂದು ಕೊರೋನಾ ಮಹಾಮಾರಿ ಇಬ್ಬರನ್ನೂ ಬಲಿ ಪಡೆದಿದೆ.