

ಪ್ರೇಮಿಗಳು ತಮ್ಮ ಖಾಸಗಿ ಕ್ಷಣ ಅನುಭವಿಸುವ ವೇಳೆ ದುರಂತ ನಡೆದು ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಲಾಡ್ಜ್ಗೆ ತೆರಳಿದ್ದ ಪ್ರೇಮಿಗಳು ಸಂಭೋಗದಲ್ಲಿ ತೊಡಗಿದ್ದ ವೇಳೆ ಯುವಕ ಮೃತಪಟ್ಟ ಘಟನೆ ನಾಗ್ಪುರದ ಸಾವೊನೆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 28 ವರ್ಷದ ಅಜಯ್ ಪರ್ಟೆಕಿ ಮೃತ ಯುವಕ.
ಪ್ರಾಥಮಿಕ ತನಿಖೆಯಲ್ಲಿ ಈತ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಅಜಯ್ ಯಾವುದೇ ರೀತಿಯ ಡ್ರಗ್ಸ್ ಸೇವನೆ ಅಥವಾ ಮದ್ಯಪಾನ ಮಾಡಿರುವ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ.
ಅಜಯ್ ಪರ್ಟೆಕಿ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ನರ್ಸ್ ಆಗಿ ಕೆಲಸ ಮಾಡುತ್ತಿರುವ 23 ವರ್ಷದ ಯುವತಿಯ ಜೊತೆ ಕಳೆದ ಮೂರು ವರ್ಷಗಿಂದ ರಿಲೇಷನ್ಶಿಪ್ನಲ್ಲಿದ್ದ ಎನ್ನಲಾಗಿದೆ. ಈ ವಿಚಾರ ಇಬ್ಬರ ಮನೆಯವರಿಗೂ ತಿಳಿದಿತ್ತು. ಅಲ್ಲದೇ ಇವರು ಇನ್ನೇನು ಕೆಲವು ದಿನಗಳಲ್ಲಿ ಮದುವೆ ಕೂಡ ಆಗಬೇಕಿತ್ತು.
ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿದ ಇವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಅರ್ಧ ಗಂಟೆ ಬಳಿಕ ಅಜಯ್ ಏಕಾ ಏಕಿ ಹಾಸಿಗೆಯ ಮೇಲೆ ಕುಸಿದು ಬಿದ್ದಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಪ್ರಿಯತಮೆ ಲಾಡ್ಜ್ನ ಸಿಬ್ಬಂದಿಯನ್ನು ಕರೆದು ಮಾಹಿತಿಯನ್ನು ನೀಡಿದ್ದಾಳೆ. ಕೂಡಲೇ ಅಜಯ್ನನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಈತ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
