Wednesday, July 2, 2025
spot_imgspot_img
spot_imgspot_img

ಗಡಿ ವಿವಾದ; ಉಭಯ ರಾಜ್ಯಗಳ ಸಿಎಂಗಳೊಂದಿಗೆ ಶಾ ಸಭೆ

- Advertisement -
- Advertisement -

ನವದೆಹಲಿ: ಕರ್ನಾಟಕ -ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದದ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವ ಸಭೆ ಕರೆದಿದ್ದಾರೆ.

ಗಡಿ ವಿವಾದ ಶಮನಗೊಳಿಸುವ ಸಲುವಾಗಿ ಡಿಸೆಂಬರ್ 14 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಲಿದ್ದಾರೆ.

ದೆಹಲಿಯಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸಂಸದರ ನಿಯೋಗದೊಂದಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ದ ನಾಯಕ ಅಮೋಲ್ ಕೋಲ್ಹೆ ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ ಈ ವಿಚಾರವನ್ನು ಹೇಳಿದ್ದಾರೆ.

ಗಡಿ ವಿವಾದವು ಹಿಂಸಾಚಾರದ ಹಂತಕ್ಕೆ ತಲುಪಿದೆ ಎಂದು ಶಾ ಅವರಿಗೆ ಮನವರಿಕೆ ಮಾಡಿದ್ದು ಹೀಗಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಸಭೆಯನ್ನು ಅಮಿತ್ ಶಾ ಚರ್ಚೆಗೆ ಕರೆದಿದ್ದಾರೆ ಎಂದು ಕೋಲ್ಹೆ ಹೇಳಿದ್ದಾರೆ.

- Advertisement -

Related news

error: Content is protected !!