Thursday, June 18, 2026
spot_imgspot_img
spot_imgspot_img

ಚುನಾವಣಾ ಗೆಲುವು; ಅಹಮದಾಬಾದ್‌‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋ

- Advertisement -
- Advertisement -

ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಗೋವಾ, ಉತ್ತರ ಖಾಂಡ್ ಚುನಾವಣಾ ಫಲಿತಾಂಶ ಹೊರಬಿದಿದ್ದು, ಇದರಲ್ಲಿ ಪಂಜಾಬ್ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿ ಗೆದ್ದ ಹಿನ್ನೆಲೆಯಲ್ಲಿ ಬಿಜೆಪಿಯು ವಿಜಯೋತ್ಸವ ಆಚರಿಸುತ್ತಿದ್ದು, ಅಹಮದಾಬಾದ್‌‌ನಲ್ಲಿ ನಿನ್ನೆ ಪ್ರದಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದಾರೆ.

ಪ್ರದಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ಮತ್ತು ಬಿಜೆಪಿ ಅಧ್ಯಕ್ಷ ಸಿ. ಆರ್. ಪಾಟೀಲ್ ಅವರೊಂದಿಗೆ ತೆರೆದ ಜೀಪಿನಲ್ಲಿ ಸಾಗಿದ್ದು, ರಸ್ತೆ ಬದಿಯಲ್ಲಿ ಪಕ್ಷದ ಕಾರ್ಯಕರ್ತರು ಜಯಘೋಷಗಳೊಂದಿಗೆ ಪ್ರಧಾನಿಗೆ ಶುಭ ಕೋರಿದ್ದಾರೆ.

ಇನ್ನು ಆರ್‌ಎಸ್‌ಎಸ್ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಾಗಿ ಪ್ರಧಾನಿ ನರೇಂದ್ರಮೋದಿ ಗುಜರಾತ್ ಗೆ ಭೇಟಿ ನೀಡಿದ್ದು, ಮೋದಿ ಅವರ ಸಮ್ಮುಖದಲ್ಲಿ ಗುಜರಾತ್ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಇಂದು ಚಾಲನೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

- Advertisement -

Related news

error: Content is protected !!