Wednesday, September 30, 2026
spot_imgspot_img
spot_imgspot_img

ಡಾ.ಕೆ.ವಿ.ರೇಣುಕಾಪ್ರಸಾದ್‌ರವರಿಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ

- Advertisement -
- Advertisement -
vtv vitla
vtv vitla

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಗೆಲುವು ಸಾಧಿಸಿ ಸುಳ್ಯಕ್ಕೆ ಆಗಮಿಸಿದ ಡಾ.ಕೆ.ವಿ.ರೇಣುಕಾಪ್ರಸಾದ್‌ರವರಿಗೆ ಸುಳ್ಯದಲ್ಲಿ ಅವರ ಬೆಂಬಲಿಗರು ಭವ್ಯ ಸ್ವಾಗತ ಕೋರಿದರು.

ಜ್ಯೋತಿ ವೃತ್ತದ ಬಳಿ ಅವರು ಆಗಮಿಸುತ್ತಿದ್ದಂತೆ ಸೇರಿದ ಅಪಾರ ಸಂಖ್ಯೆಯ ಜನ ಅವರಿಗೆ ಹಾರಾರ್ಪಣೆಗೈದರು. ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು. ಜ್ಯೋತಿ ಸರ್ಕಲ್‌ನಿಂದ ವಾಹನ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಅಲಂಕೃತ ತೆರೆದ ವಾಹನದಲ್ಲಿ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪೋಟೋವನ್ನು ಇರಿಸಲಾಗಿತ್ತು.

ಬಸ್ ನಿಲ್ದಾಣದ ಬಳಿ ಇರುವ ಕೆವಿಜಿ ಪುತ್ಥಳಿಗೆ ಡಾ.ರೇಣುಕಾಪ್ರಸಾದ್‌ರವರು ಹಾರಾರ್ಪಣೆ ಗೈದರು. ಬಳಿಕ ಕೆವಿಜಿ ಕ್ಯಾಂಪಸ್ ಬಳಿ ಇರುವ ಕೆವಿಜಿ ಪುತ್ಥಳಿಗೂ ಹಾರಾರ್ಪಿಸಲಾಯಿತು. ಡಾ.ಜ್ಯೋತಿ ರೇಣುಕಾಪ್ರಸಾದ್ ಜೊತೆಗಿದ್ದರು. ಗೌಡ ಯುವ ಸೇವಾ ಸಂಘದ ಪದಾಧಿಕಾರಿಗಳು, ಡಾ.ಕೆ.ವಿ.ರೇಣುಕಾಪ್ರಸಾದ್ ಒಡೆತನದ ವಿದ್ಯಾಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

vtv vitla
vtv vitla
- Advertisement -

Related news

error: Content is protected !!