- Advertisement -
- Advertisement -
ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ ಬೈಕ್ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಳವಾಗಿರುವ ಬೈಕ್ ಮೂಡಿಗೆರೆಯ ಗಂಗನ್ ಮಕ್ಕಿ ಎನ್ನುವಲ್ಲಿ ಪತ್ತೆಯಾಗಿದೆ.
ಪುದುವಟ್ಟು ಗ್ರಾಮದ ಜೀವನ್ ಎಂಬ ಯುವಕ ಧರ್ಮಸ್ಥಳ ದ್ವಾರದ ಬಳಿ ತನ್ನ ಬೈಕನ್ನು ನಿಲ್ಲಿಸಿ ಹೋಗಿದ್ದ ವೇಳೆ ಯಾರೋ ಅಪರಿಚಿತ ಯುವಕ ಯುವತಿಯೋರ್ವಳನ್ನು ಆ ಬೈಕ್ ಮೇಲೆ ಕುಳ್ಳಿರಿಸಿ ಕೊಕ್ಕಡ ರಸ್ತೆಯಲ್ಲಿ ಸಾಗಿರುವ ದೃಶ್ಯ ಸೆರೆಯಾಗಿದ್ದು, ಎಷ್ಟೇ ಪತ್ತೆ ಹಚ್ಚಿದರೂ ಸಿಗದ ಬೈಕ್ ಇದೀಗ ಮೂಡಿಗೆರೆಯ ಗಂಗನ್ ಮಕ್ಕಿ ಎನ್ನುವಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಒಂದು ವಾರಗಳ ಕಾಲ ಗಂಗನಮಕ್ಕಿ ಎಂಬಲ್ಲಿ ಬೈಕ್ ಪತ್ತೆಯಾಗಿತ್ತು, ವಾರಗಳ ಕಾಲ ನಿಲ್ಲಿಸಿದ ಈ ಬೈಕ್ ಯಾರದು ಎಂದು ತಿಳಿಯದ ಸ್ಥಳೀಯರು ಮೂಡಿಗೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಕ್ ಮಾಲಕರಿಗೆ ಮಾಹಿತಿ ತಿಳಿಸಲಾಗಿದೆ ಎನ್ನಲಾಗುತ್ತಿದೆ.
- Advertisement -