Monday, September 28, 2026
spot_imgspot_img
spot_imgspot_img

ನಾಗಾಸಾಧು ಶ್ರೀ ಬಾಬಾವಿಠಲಗಿರಿ‌ ಮಹಾರಾಜರಿಂದ ಕಾರಿಂಜೇಶ್ವರದಲ್ಲಿ “ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಧ್ಯೇಯದೊಂದಿಗೆ ‘ಯುವಶಕ್ತಿ ಸೇವಾಪಥ’ದ ನೂತನ ಲೋಗೋ ಲೋಕಾರ್ಪಣೆ

- Advertisement -
- Advertisement -

ಜಿಲ್ಲಾಮಟ್ಟದಲ್ಲಿ‌ ಸೇವಾಕ್ರಾಂತಿಗೆ ಮುನ್ನುಡಿಯಿಟ್ಟಿದೆ 2021 ರ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯುವಶಕ್ತಿ ತಂಡ.
ಯುವಶಕ್ತಿ ರಕ್ತನಿಧಿ , ಯುವಶಕ್ತಿ ಉದ್ಯೋಗನಿಮಿತ್ತಂ ಬಳಿಕ ಇದೀಗ ಅಶಕ್ತರ ಕಣ್ಣೀರು ಒರೆಸಿ ಸಹಾಯಹಸ್ತ ಚಾಚುವ ಸೇವಾಯೋಜನೆಗಳನ್ನು ಕೈಗೊಂಡು ಬಡವರ ಸೇವೆಗಾಗಿ ಯುವಶಕ್ತಿ ಸೇವಾಪಥ ಸಿದ್ದಗೊಂಡಿದೆ.

“ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಧ್ಯೇಯದೊಂದಿಗೆ ‘ಯುವಶಕ್ತಿ ಸೇವಾಪಥ’ದ ನೂತನ ಲೋಗೋ ಶ್ರೀ ಕ್ಷೇತ್ರದ ಕಾರಿಂಜೇಶ್ವರನ ಸನ್ನಿಧಿಯಲ್ಲಿ ನಾಗಾಸಾಧು ಶ್ರೀ ಬಾಬಾವಿಠಲಗಿರಿ‌ ಮಹಾರಾಜರ ದಿವ್ಯಹಸ್ತದಿಂದ ಲೋಕಾರ್ಪಣೆಗೊಂಡಿದ್ದು ದೇವಸ್ಥಾನದ ಆಡಳಿತ ವರ್ಗ, ಅರ್ಚಕವೃಂದ,ಸಂಘಟನೆಗಳ ಪ್ರಮುಖರು, ಹಿರಿಯರು, ಕಾರ್ಯಕರ್ತ ಮಿತ್ರರು ಉಪಸ್ಥಿತರಿದ್ದು ಶುಭಹಾರೈಸಿದರು.

vtv vitla
vtv vitla

ಪ್ರತೀ ತಾಲೂಕಿನಲ್ಲಿ ಟೀಂ ಸೇವಾಪಥ ಕಾರ್ಯನಿರ್ವಹಿಸುವ ಜೊತೆಗೆ ಜಿಲ್ಲೆಯ ಹತ್ತುಹಲವು ಸಂಘಸಂಸ್ಥೆಗಳು ಸೇವಾಪಥದೊಂದಿಗೆ ಕೈಜೋಡಿಸಲಿದ್ದು ಸಮಾಜಕಾರ್ಯಕ್ಕಾಗಿ ಸಜ್ಜಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!