Tuesday, June 16, 2026
spot_imgspot_img
spot_imgspot_img

ಪಾಟ್ರಕೋಡಿ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ಪ್ರಾರಂಭೋತ್ಸವ

- Advertisement -
- Advertisement -

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳು ಹಾಗೂ ಗುರುಗಳು, ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪ್ರೀತಿಪೂರಕವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಮಿತಿಯ ಅಧ್ಯಕ್ಷರಾದ ಅಶ್ರಪ್ ತಾರಿಪಡ್ಪು, ಪಂಚಾಯತ್ ಸದಸ್ಯರಾದ ಉಮೇಶ್ ಮುರುವ, ಶಾಲಾಭಿವೃಧಿ ಸಮಿತಿಯ ಉಪಾಧ್ಯಕ್ಷರಾದ ಬದ್ರುನೀಶಾ, ಸದಸ್ಯರಾದ ಹರೀಶ್ ಕುದ್ದುಂಬ್ಲಾಡಿ, ರಫೀಕ್ ಮದನಿ, ಅಬ್ದುಲ್ ರಜಾಕ್ ಪಾಟ್ರಕೋಡಿ, ಕೈರುನೀಶಾ, ಅಯೀಸ ಮುಖ್ಯಗುರುಗಳಾದ ಶರಣಪ್ಪ ಸರ್ ಹಾಗು ಗುರುಗಳು ಮತ್ತು ಸ್ಥಳಿಯರಾದ ಇಬ್ರಾಹಿಂರವರು ಭಾಗವಹಿಸಿದರು. ಮುಖ್ಯ ಗುರುಗಳಾದ ಶರಣಪ್ಪ ಸರ್ ರವರು ಸ್ವಾಗತಿಸಿ ಗುರುಗಳಾದ ಪ್ರಭಾವತಿ ಟೀಚರ್ ವಂದಿಸಿದಾರೆ ಗುರುಗಳಾದ ಮುಬಾರಕ್ ಸರ್ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Related news

error: Content is protected !!