Monday, June 22, 2026
spot_imgspot_img
spot_imgspot_img

ಪುತ್ತೂರು: ಕಾಂಗ್ರೇಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ನಾಮಪತ್ರ ಸಲ್ಲಿಕೆ

- Advertisement -
- Advertisement -

ಮೆರವಣಿಗೆ ರಂಗು ನೀಡಿದ ನಾಸಿಕ್‌ ಬ್ಯಾಂಡ್‌, ಹುಲಿವೇಷ, ಕೀಲುಕುದುರೆ, ಚೆಂಡೆ, ರೋಡ್‌ ಶೋ

vtv vitla

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರು ಇಂದು ನಾಮಪತ್ರ ಸಲ್ಲಿಸಲಿದ್ದು, ದರ್ಬೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಹಾರಾರ್ಪಣೆ ಮಾಡಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ದರ್ಬೆ ವೃತ್ತದಿಂದ ಕಿಲ್ಲೆ ಮೈದಾನದವರೆಗೆ ಬೃಹತ್‌ ಮೆರವಣಿಗೆ ಸಾಗಿದರು.ಈ ವೇಳೆ ಸುಮಾರು ಸಾವಿರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು. ನಾಸಿಕ್‌ ಬ್ಯಾಂಡ್‌, ಹುಲಿವೇಷ, ಕೀಲುಕುದುರೆ, ಚೆಂಡೆ, ರೋಡ್‌ ಶೋ ಮೆರವಣಿಗೆ ರಂಗು ನೀಡಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ ರಾಜಾರಾಮ್, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಮೆರವಣಿಗೆಯಲ್ಲಿ ಉಪಸ್ಥಿತರಿದ್ದಾರೆ.

- Advertisement -

Related news

error: Content is protected !!