Friday, September 11, 2026
spot_imgspot_img
spot_imgspot_img

ಪುತ್ತೂರು: ಕಾಲೇಜಿಗೆ ಹಿಜಾಬ್ ಧರಿಸಿ ಬಂದಲ್ಲಿ ಸಸ್ಪೆಂಡ್: ವಿದ್ಯಾರ್ಥಿನಿಯರಿಗೆ ಪಾಠ ಮುಖ್ಯವೋ, ಧಾರ್ಮಿಕತೆ ಮುಖ್ಯವೋ; ಶಾಸಕ ಸಂಜೀವ ಮಠಂದೂರು

- Advertisement -
- Advertisement -
vtv vitla

ಪುತ್ತೂರು: ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿದೆ. ಇವತ್ತು ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು ಎಂದು ಉಪ್ಪಿನಂಗಡಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೈಕೋರ್ಟ್ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದ ಅವರು ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿದೆ. ಇವತ್ತು ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು.

ವಿದ್ಯಾರ್ಥಿನಿಯರಿಗೆ ಪಾಠ ಮುಖ್ಯವೋ, ಧಾರ್ಮಿಕತೆ ಮುಖ್ಯವೋ ಎನ್ನುವುದನ್ನು ಸ್ಪಷ್ಟ ಪಡಿಸಬೇಕು. ಕಾಂಗ್ರೆಸ್ ಮುಖಂಡ ಯು.ಟಿ. ಖಾದರ್ ಹಿಜಾಬ್ ಕುರಿತ ವಾಸ್ತವಿಕತೆಯನ್ನು ಹೇಳಿದ್ದಾರೆ. ಓರ್ವ ಮುಸ್ಲಿಂ ಮುಖಂಡನ ಮಾತನ್ನು ವಿದ್ಯಾ ರ್ಥಿಗಳು ಒಪ್ಪಿಕೊಳ್ಳಬೇಕು. ವಿದ್ಯಾರ್ಥಿಗಳ ಬೇಜಾವಬ್ದಾರಿಯ ನಡೆಯನ್ನು ಇನ್ನು ಸಹಿಸುವುದಿಲ್ಲ .

ಸರಕಾರಿ ಕಾಲೇಜು ಸರ್ವಧರ್ಮೀಯರಿಗೆ ಪಾಠ, ಪ್ರವಚನ ನೀಡುವ ಕೇಂದ್ರವಾಗಿದೆ. ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾ ಗಿ ಅನುಷ್ಠಾನಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು

ಕಾಲೇಜಿಗೆ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಎಫ್.ಐ.ಆರ್ ದಾಖಲಾಗಿದೆ. ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಎಸ್.ಪಿ ಮತ್ತು ಡಿವೈಎಸ್ಪಿ ಗೆ ಸೂಚಿಸಿದ್ದೇನೆ. ಪತ್ರಕರ್ತರು ಈಗಾಗಲೇ ಮನವಿ ಮತ್ತು ಪ್ರತಿಭಟನೆಯನ್ನೂ ಮಾಡಿದ್ದಾರೆ. ಗೃಹಸಚಿವರು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮದ ಭರವಸೆಯನ್ನೂ ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

- Advertisement -

Related news

error: Content is protected !!