Tuesday, April 30, 2024
spot_imgspot_img
spot_imgspot_img

ಪುತ್ತೂರು: ತಂದೆಯ ಸ್ನೇಹಿತನಿಂದಲೇ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಯ ಬಂಧನ

- Advertisement -G L Acharya panikkar
- Advertisement -

ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾವು ಮಾಲಡ್ಕ ನಿವಾಸಿಯೋರ್ವರನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾವು ಲುಬಾಬಾ ಮಂಝಿಲ್ ನಿವಾಸಿ ತಕಿಯುದ್ದೀನ್ ಬಂಧಿತ ಆರೋಪಿ. ಈತ ಸಂತ್ರಸ್ಥ ಬಾಲಕಿಯ ತಂದೆಯ ಸ್ನೇಹಿತನಾಗಿದ್ದ. ಈತ ಬಾಲಕಿಯ ಮನೆಗೆ ಬಂದು ಹೋಗುತ್ತಿರುವುದಲ್ಲದೆ ಸಲುಗೆಯಿಂದ ಇದ್ದ . ಅಕ್ಟೋಬರ್ ತಿಂಗಳಲ್ಲಿ ಬಾಲಕಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಆತ ಹಿಂಬಾಲಿಸಿಕೊಂಡು ಬಂದು ಪ್ರತ್ಯೇಕವಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ . ನಿನ್ನನ್ನು ಸ್ಕೂಲ್‌ಗೆ ಬಿಡುತ್ತೇನೆ ಎಂದು ಒತ್ತಾಯ ಮಾಡಿರುವುದಲ್ಲದೆ ಬಾರದೇ ಇದ್ದಲ್ಲಿ ನಿನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಸಿರುತ್ತಾನೆ. ಅ.5ರಂದು ರಾತ್ರಿ 12 ಗಂಟೆಗೆ ತಕಿಯುದ್ದೀನ್ ಸಂತ್ರಸ್ಥೆಯ ಮನೆಯ ಬಾಗಿಲು ತಟ್ಟಿದ್ದಾನೆ. ಅಲ್ಲದೆ ಆಕೆ ಮಲುಗುವ ಕೋಣೆಯ ಕಿಟಕಿಯ ಬಾಗಿಲನ್ನು ತಟ್ಟುತ್ತಿದ್ದ .

ನ.10ರಂದು ಬೆಳಿಗ್ಗೆ ಆಕೆ ಶಾಲೆಗೆ ಹೋಗಲು ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಆಕೆಯನ್ನು ತಡೆದು ನಿಲ್ಲಿಸಿ ತನ್ನ ಜೊತೆಗೆ ಬೈಕ್‌ನಲ್ಲಿ ಬರುವಂತೆ ಒತ್ತಾಯದಿಂದ ಕರೆದುಕೊಂಡು ಹೋಗಿ ಜನ ನಿಬಿಡ ಸ್ಥ ಳದಲ್ಲಿ ಬೈಕ್ ನಿಲ್ಲಿಸಿ ನಾನು ಹೇಳಿದಂತೆ ಕೇಳಬೇಕು. ಸಹಕರಿಸದೇ ಇದ್ದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಡಿ.22ರಂದು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿ ತಕಿಯುದ್ದೀನ್‌ನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!