Saturday, June 6, 2026
spot_imgspot_img
spot_imgspot_img

ಪುತ್ತೂರು: ಬೈಕ್‌-ಬಸ್‌ ನಡುವೆ ಅಪಘಾತ; ಬೈಕ್‌ ಸವಾರನಿಗೆ ಗಂಭೀರ ಗಾಯ

- Advertisement -
- Advertisement -

ಪುತ್ತೂರು: ಉಪ್ಪಿನಂಗಡಿಯ ಹಳೇ ಅರಣ್ಯ ತಪಾಸಣ ಕೇಂದ್ರದ ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಭರತ್‌ ಕುಮಾರ್‌ (19) ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಪೆಟ್ರೋಲ್‌ ಪಂಪೊಂದರಲ್ಲಿ ಕಾರ್ಮಿಕನಾಗಿರುವ ಭರತ್‌ ಕುಮಾರ್‌ ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿಯಾಗಿದ್ದು, ಕಾರ್ಯನಿಮಿತ್ತ ಉಪ್ಪಿನಂಗಡಿಗೆ ಬೈಕ್‌ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಬೈಕ್‌ ಬಸ್ಸಿನಡಿಗೆ ಸಿಲುಕಿ ನಜ್ಜುಗುಜ್ಜಾಗಿದ್ದು, ಬೈಕ್‌ ಸವಾರ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

- Advertisement -

Related news

error: Content is protected !!