Monday, May 20, 2024
spot_imgspot_img
spot_imgspot_img

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 1,500 ಪುಟಗಳ ಜಾರ್ಜ್‌‌ಶೀಟ್‌ ಸಲ್ಲಿಕೆ..! ಪಿಎಫ್‌ಐನ ಕರಾಳತೆ ಬಹಿರಂಗ – ಪ್ರತೀಕಾರ.. ಸ್ಕೆಚ್.. ತರಬೇತಿ.. ಕೊಲೆ..!??

- Advertisement -G L Acharya panikkar
- Advertisement -

ಬೆಳ್ಳಾರೆಯಲ್ಲಿ ನಡೆದ ಹಿಂದೂ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1,500 ಪುಟಗಳ ಜಾರ್ಜ್‌‌ಶೀಟ್‌ನ್ನು ಪೊಲೀಸರು ಸಲ್ಲಿಸಿದ್ದಾರೆ. ಈ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪಿಎಫ್‌ಐ ಸಂಘಟನೆಯು ಹಿಂದೂ ಮುಖಂಡರನ್ನೇ ಟಾರ್ಗೆಟ್‌ ಮಾಡಿ ಈ ಕೊಲೆಗೆ ಸಂಚು ರೂಪಿಸಿತ್ತು ಎನ್ನುವ ಭಯಾನಕ ಅಂಶ ತನಿಖೆ ವೇಳೆ ಬಯಲಾಗಿದೆ.

ಜುಲೈ 19ರಂದು ಮಸೂದ್‌ ಮೇಲೆ ಹಲ್ಲೆ ನಡೆದು ಮಂಗಳೂರಿನ ಆಸ್ಪತ್ರೆಯಲ್ಲಿ ಜುಲೈ 21ರಂದು ಸಾವನ್ನಪ್ಪಿದ್ದರು. ಮಸೂದ್‌ ಅಂತ್ಯಕ್ರಿಯೆ ನಂತರ ಪ್ರತಿಕಾರ ತೀರಿಸಲು ಪಿಎಫ್‌ಐ ನಿರ್ಧರಿಸಿತ್ತು. ಹತ್ಯೆಗೆ ಪ್ರವೀಣ್‌ ನೆಟ್ಟಾರು, ಪ್ರಶಾಂತ್‌, ಪೃಥ್ವಿರಾಜ್‌ ಸೇರಿ ನಾಲ್ವರು ಹಿಂದೂ ಮುಖಂಡರ ಹೆಸರನ್ನು ಪಟ್ಟಿಮಾಡಿತ್ತು. ನಂತರ ಬೆಂಗಳೂರಿನ ಪಿಎಫ್‌ಐ ಕಚೇರಿಯಲ್ಲಿ ಮೀಟಿಂಗ್‌ ನಡೆಸಿ ಪ್ರವೀಣ್‌ ನೆಟ್ಟಾರು ಹೆಸರನ್ನು ಅಂತಿಮಗೊಳಿಸಿತ್ತು. ಈ ಮೀಟಿಂಗ್‌ನಲ್ಲಿ ಕೊಲೆ ಆರೋಪಿಗಳಾದ ಮಸೂದ್‌, ಶರೀಫ್‌ ಕೊಣಾಜೆ ಭಾಗಿಯಾಗಿದ್ದರು.

ಕೊಲೆಗೆ ಪ್ರವೀಣ್‌ ಹೆಸರು ಅಂತಿಮವಾದ ನಂತರ ಪ್ರವೀಣ್‌ ಹಿಂಬಾಲಿಸಿ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಪ್ರವೀಣ್‌ ಹತ್ಯೆಗೆ ಕೊನೆ ಕ್ಷಣದಲ್ಲಿ ಮುಸ್ತಾಫಾ ಪೈಚಾರ್‌ ಆದೇಶ ನೀಡಿದ್ದ ಎಂದು ಜಾರ್ಜ್‌‌ಶೀಟ್‌ನಿಂದ ಬಹಿರಂಗವಾಗಿದೆ. ಪ್ರವೀಣ್‌ ನೆಟ್ಟಾರು ಅಂಗಡಿ ಮುಚ್ಚಿ ಹೊರ ಬರುತ್ತಿದಂತೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ನಡೆಸಿದರು.

ಪ್ರಕರಣದ 20 ಮಂದಿ ಆರೋಪಿಗಳ ಪಟ್ಟಿ

ಮಹಮ್ಮದ್ ಸಯ್ಯದ್ (ಒಂದನೇ ಆರೋಪಿ), ಸುಳ್ಯ

ಅಬ್ದುಲ್ ಬಷೀರ್ (ಎರಡನೇ ಆರೋಪಿ) (29 ವರ್ಷ), ಸುಳ್ಯ

ರಿಯಾಜ್ (ಮೂರನೇ ಆರೋಪಿ) (28 ವರ್ಷ), ಪುತ್ತೂರು

ಮುಸ್ತಾಫ ಫೈಚಾರ್ (ನಾಲ್ಕನೇ ಆರೋಪಿ) ಅಲಿಯಾಸ್ ಮಹಮ್ಮದ್ ಮುಸ್ತಾಫ ಎಸ್. (48 ವರ್ಷ), ಸುಳ್ಯ

ಮಸೂದ್ ಕೆ.ಎ. (ಐದನೇ ಆರೋಪಿ), (40 ವರ್ಷ), 34 ನೆಕ್ಕಿಲಾಡಿ, ದಕ್ಷಿಣ ಕನ್ನಡ

ಕೊಡಾಜೆ ಮಹಮ್ಮದ್ ಶರೀಫ್ (ಆರನೇ ಆರೋಪಿ), (53 ವರ್ಷ), ಬಂಟ್ವಾಳ

ಅಬೂಬಕ್ಕರ್ ಸಿದ್ದಿಕ್ (ಏಳನೇ ಆರೋಪಿ) (38 ವರ್ಷ), ಬೆಳ್ಳಾರೆ

ನೌಫಾಲ್ ಎಂ (ಎಂಟನೇ ಆರೋಪಿ) (38 ವರ್ಷ) ಬೆಳ್ಳಾರೆ

ಇಸ್ಮಾಯಿಲ್ ಶಾಫಿ ಕೆ. (ಒಂಬತ್ತನೇ ಆರೋಪಿ)

ಕೆ.ಮಹಮ್ಮದ್ ಇಕ್ವಾಲ್ (ಹತ್ತನೇ ಆರೋಪಿ),

ಶಹೀದ್ ಎಂ (11ನೇ ಆರೋಪಿ) (38 ವರ್ಷ)

ಮಹಮ್ಮದ್ ಶಫೀಕ್ (12ನೇ ಆರೋಪಿ) (28 ವರ್ಷ)

ಉಮರ್ ಫಾರೂಕ್ ಎಂ.ಆರ್. (13ನೆ ಆರೋಪಿ) (22 ವರ್ಷ)

ಅಬ್ದುಲ್ ಕಬೀರ್ ಸಿ.ಎ (14ನೇ ಆರೋಪಿ) (33 ವರ್ಷ)

ಮುಹಮ್ಮದ್ ಇಬ್ರಾಹಿಂ ಷಾ (15ನೇ ಆರೋಪಿ) (23 ವರ್ಷ),

ಸೈನುಲ್ ಆಬೀದ್ (16ನೇ ಆರೋಪಿ) (23 ವರ್ಷ)

ಶೇಖ್ ಸದ್ದಾಂ ಹುಸ್ಸೇನ್ (17ನೇ ಆರೋಪಿ) (28 ವರ್ಷ)

ಝಾಕೀರ್ ಎ (18ನೇ ಆರೋಪಿ), (30 ವರ್ಷ)

ಎನ್.ಅಬ್ದುಲ್ ಹ್ಯಾರಿಸ್ (19ನೇ ಆರೋಪಿ) (40 ವರ್ಷ)

ತುಫಾಯಿಲ್ ಎಂ.ಎಚ್. (20ನೇ ಆರೋಪಿ) (36 ವರ್ಷ)

ದ.ಕನ್ನಡದಲ್ಲಿ 21 ಮಸೀದಿಗಳು ಕೃತ್ಯಕ್ಕೆ ಬಳಕೆ ಮಾಡಿದ್ದು, ಹಂತಕರ ಟೀಂ ಆಯ್ಕೆ ಮಾಡಿ ಮುಸ್ತಫಾ ಹಾಗೂ ಮಸೂದ್‌ ಮಿತ್ತೂರಿನ ಕಮ್ಯೂನಿಟಿ ಹಾಲ್‌ನಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ನಡೆಸಿ ಹತ್ಯೆಗೆ ಟ್ರೈನಿಂಗ್‌ ನೀಡಿದ್ದರು. ಕೊಲೆ ನಡೆಸುವ ಮೂರು ದಿನದ ಮುಂಚೆ ಶಾಹೀದ್‌ ಮನೆಯಲ್ಲಿ ಕೊಲೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿದ್ದರು. ಈ ಸ್ಕೆಚ್ ಪ್ರತಿಯನ್ನು ಹತ್ತನೇ ಆರೋಪಿ ಮೊಹಮದ್‌ ಇಕ್ಬಾಲ್‌ ಮನೆಯಿಂದ ಎನ್‌ಐಎ ವಶಕ್ಕೆ ಪಡೆದುಕೊಂಡಿದ್ದು, ಹತ್ಯೆ ನಡೆದ ಸ್ಥಳಕ್ಕೂ ಆರೋಪಿ ಮನೆಯಲ್ಲಿ ಮನೆಯಲ್ಲಿ ಸಿಕ್ಕ ಪ್ರತಿಗೂ ಸಾಮ್ಯತೆ ಇದೆ.

ರಾಷ್ಟ್ರೀಯ ತನಿಖಾ ದಳ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನ ಪ್ರಮುಖ ಅಂಶಗಳು

ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿತ್ತು. 2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ ಹತ್ಯೆಯಾಗಿದೆ. ಇದಕ್ಕಾಗಿ ಪಿಎಫ್ ಐ ಹತ್ಯೆಗಳನ್ನು ನಡೆಸಲು ಸರ್ವೀಸ್ ಟೀಂ ಮತ್ತು ಕಿಲ್ಲರ್ ಸ್ಕ್ವಾಡ್‌ಗಳನ್ನು ರಚಿಸಿತ್ತು. ಪಿಎಫ್ಐನ ಈ ತಂಡಗಳು ಶತ್ರುಗಳು ಮತ್ತು ಗುರಿಗಳನ್ನು ಖಾತ್ರಿ ಪಡಿಸಿ ಹತ್ಯೆ ನಡೆಸಲು ಕೆಲವು ಸಮುದಾಯಗಳು ಮತ್ತು ಗುಂಪುಗಳಿಗೆ ಸೇರಿದ ವ್ಯಕ್ತಿಗಳು/ನಾಯಕರನ್ನು ಗುರುತಿಸಲು ಮತ್ತು ಅವರ ಪಟ್ಟಿ ಮಾಡಲು ಮತ್ತು ಕಣ್ಗಾವಲು ಹಾಕಲು ಈ ಸರ್ವೀಸ್ ಟೀಂ ಸದಸ್ಯರಿಗೆ ತರಬೇತಿ ನೀಡಲಾಗಿತ್ತು

ಆರೋಪಿಗಳಾದ 20 ಜನರಲ್ಲಿ 15 ಜನರ ಬಂಧನವಾಗಿದ್ದು, 5 ಮಂದಿ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳಲ್ಲಿ ನಾಲ್ಕನೇ ಆರೋಪಿ ಮುಸ್ತಾಫಾ ಪೈಚಾರು(Mustafa Paicharu), ಆರನೇ ಆರೋಪಿ ಕೊಡಾಜೆ ಮೊಹಮ್ಮದ್ ಷರೀಫ್(Kodaje Mohammad Sharif), ಐದನೇ ಆರೋಪಿ ಮಸೂದ್ ಕೆ.ಎ, ಏಳನೇ ಆರೋಪಿ ಅಬೂಬಕ್ಕರ್ ಸಿದ್ದಿಕ್ ಹಾಗೂ 20ನೇ ಆರೋಪಿ ತುಫಾಯಿಲ್ ಎಂ.ಎಚ್. ತಲೆಮರೆಸಿಕೊಂಡಿದ್ದಾರೆ. ಇವರ ಕುರಿತು ಸುಳಿವು ನೀಡಿದವರಿಗೆ ಎನ್‌ಐಎ ಬಹುಮಾನ ಘೋಷಣೆ ಮಾಡಿದೆ. ಎನ್.ಐ.ಎ 1500 ಪುಟಗಳ ಸುದೀರ್ಘ ಚಾರ್ಜ್ ಶೀಟ್(Chargesheet) ಸಲ್ಲಿಕೆ ಮಾಡಿದೆ‌. 240 ಸಾಕ್ಷಿದಾರರ ಹೇಳಿಕೆ ಇರೋ ಬೃಹತ್ ಚಾರ್ಜ್ ಶೀಟ್ ಇದಾಗಿದೆ.

- Advertisement -

Related news

error: Content is protected !!