Monday, June 22, 2026
spot_imgspot_img
spot_imgspot_img

ಫಾರಿನ್ ಟ್ರಿಪ್ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಆರೋಪಿ ಖಾಕಿ ಬಲೆಗೆ!

- Advertisement -
- Advertisement -

ಬೆಂಗಳೂರು: ಕಂಪನಿಯೊಂದರ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿ ಪ್ರಶಾಂತ್ ಬಿ ಎಂದು ತಿಳಿದುಬಂದಿದೆ. ಈತ ರಾಯಲ್ ಡ್ರೀಮ್ ಟು ಫ್ಲೈ ಪ್ರೈ.ಲಿ ಕಂಪನಿ ಮೂಲಕ ಜನರಿಗೆ ವಿಧ ವಿಧದ ಆಸೆ, ಆಮಿಷ ತೋರಿಸಿ ವಂಚಿಸುತ್ತಿದ್ದ.

ಆರೋಪಿ ಪ್ರಶಾಂತ್ ಫಾರಿನ್ ಟ್ರಿಪ್ ಹೆಸರಲ್ಲಿ ಜನರನ್ನು ಸೆಳೆದು ಮೋಸ ಮಾಡುತ್ತಿದ್ದ. ಬಳಿಕ ಚೈನ್ ಲಿಂಕ್ ನಲ್ಲಿ ಬೇರೆಯವರನ್ನು ಕಂಪನಿಗೆ ಸೇರಿಸುವಂತೆ ಬೇಡಿಕೆ ಇಡುತಿದ್ದ. ಹೊಸದಾಗಿ ಸೇರಿಸಿದ್ರೆ ಅವರ ಲಾಭದಲ್ಲಿ 25% ಹಣ ನೀಡುವುದಾಗಿ ನಂಬಿಸುತಿದ್ದ. ಬಳಿಕ ಯಾವುದೆ ಹಣ ನೀಡದೆ ಟ್ರಿಪ್ ಸಹ ಕರೆದುಕೊಂಡು ಹೋಗದೆ ವಂಚಿಸುತಿದ್ದ. ಸದ್ಯ ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -

Related news

error: Content is protected !!