Sunday, September 20, 2026
spot_imgspot_img
spot_imgspot_img

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಮೃತ್ಯು

- Advertisement -
- Advertisement -

ಬಂಟ್ವಾಳ: ಮೂಡಪಡುಕೋಡಿ ಗ್ರಾಮದ ಪಂಜೋಡಿ ನಿವಾಸಿ ಬಾಲಕನೋರ್ವ ಖಾಯಿಲೆ ಉಲ್ಬಣಿಸಿ ಮೃತಪಟ್ಟ ಘಟನೆ ನಡೆದಿದೆ.

vtv vitla
vtv vitla

ಪಂಜೋಡಿ ನಿವಾಸಿ ನಳಿನಾಕ್ಷಿ ಶೆಟ್ಟಿ ಅವರ ಪುತ್ರ ಧ್ವನಿತ್(6) ಮೃತಪಟ್ಟ ಬಾಲಕನಾಗಿದ್ದಾನೆ. ಬಾಲಕ ಕಳೆದ ಮೂರು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದು, ಮಾ. 20ರಂದು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋದಾಗ ಖಾಯಿಲೆ ಉಲ್ಬಣಿಸಿದೆ. ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

vtv vitla
vtv vitla
- Advertisement -

Related news

error: Content is protected !!