Thursday, May 2, 2024
spot_imgspot_img
spot_imgspot_img

ಬಂಟ್ವಾಳ: ಪೈಪ್‌ಲೈನ್‌ ಕೊರೆದು ಡೀಸೆಲ್ ಕಳವು ಪ್ರಕರಣ; ಪ್ರಮುಖ ಆರೋಪಿ ಖಾಕಿ ವಶಕ್ಕೆ!

- Advertisement -G L Acharya panikkar
- Advertisement -

ಬಂಟ್ವಾಳ: ಅರಳ ಗ್ರಾಮದಲ್ಲಿ ಆಯಿಲ್‌ ಮತ್ತು ನ್ಯಾಚುರಲ್‌ ಲಿಮಿಟೆಡ್‌ ಹಾಗೂ ಹಿಂದೂಸ್ತಾನ್‌ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್‌ ಲೈನ್‌ ಕೊರೆದು ಪೈಪ್‌ ಅಳವಡಿಸಿ ಸುಮಾರು 40 ಲಕ್ಷದ ಪೆಟ್ರೋಲಿಯಂ ಉತ್ಪನ್ನ ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಹಣ್ಣಿನೊಳಗೆ ಗಾಂಜಾವನ್ನಿಟ್ಟು ಖೈದಿಗೆ ನೀಡಲು ಯತ್ನಿಸಿದ ವ್ಯಕ್ತಿ ಅಂದರ್!

ಐವನ್‌ ಚಾರ್ಲ್‌ ಪಿಂಟೋ ಬಂಧಿತ ಆರೋಪಿಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್‌ ಅಧೀಕ್ಷಕರು, ದ.ಕ ಜಿಲ್ಲೆ ರವರ ನಿರ್ದೇಶನದಂತೆ ಮಾನ್ಯ ಪೊಲೀಸ್‌ ಉಪಾಧೀಕ್ಷಕರು, ಬಂಟ್ವಾಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ಟಿ.ಡಿ ನಾಗರಾಜ್‌ ರವರ ನೇತೃತ್ವದ ತಂಡ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೂಡುಬಿದಿರೆ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಕಾಮುಕ ಚಿಕ್ಕಪ್ಪ ಅರೆಸ್ಟ್!

ಪ್ರಮುಖ ಆರೋಪಿಯಾದ ಐವನ್‌ ಚಾರ್ಲ್‌ ಪಿಂಟೋ ಎಂಬಾತನಿಂದ ಕೃತ್ಯಕ್ಕೆ ಬಳಸಿದ ಒಂದು ಜೀಪ್‌, ಡಿಸೇಲ್‌ ಕೊಂಡು ಹೋಗಲು ಬಳಸಿದ ಕ್ಯಾನ್‌ ಗಳು ಮತ್ತು ಡಿಸೇಲ್‌ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯದಲ್ಲಿ ಪೈಪ್ ಲೈನ್‌ ಗೆ ಹೋಲ್‌ ತೆಗೆದು ವೆಲ್ಡಿಂಗ್‌ ಮಾಡಿ ಪೈಪ್‌ ಲೈನ್‌ ಅಳವಡಿಸಿದ ವೆಲ್ಡರ್‌ ಗಳಾದ ಪಚ್ಚನಾಡಿ ಬೋಂದೆಲ್‌ ನಿವಾಸಿ ಅಜಿತ್‌ ಮತ್ತು ಕಣ್ಣೂರು ನಿವಾಸಿ ಜೋಯೆಲ್‌ ಪ್ರೀತಮ್‌ ಡಿʻಸೋಜನನ್ನು ಬಂಧಿಸಿರುತ್ತಾರೆ. ಪ್ರಕರಣದಲ್ಲಿ ಉಳಿದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್‌.ಐ ಪ್ರಸನ್ನ,
ಹೆಚ್.ಸಿಗಳಾದ ಜನಾರ್ಧನ, ಗೋಣಿಬಸಪ್ಪ, ಸುರೇಶ್‌ ಪಿ.ಸಿಗಳಾದ ಮನೋಜ್‌, ಪುನೀತ್‌ ರವರು ಪಾಲ್ಗೊಂಡಿರುತ್ತಾರೆ.

- Advertisement -

Related news

error: Content is protected !!