Tuesday, July 28, 2026
spot_imgspot_img
spot_imgspot_img

ಬಂಟ್ವಾಳ: ಹ್ಯೂಮನ್ ರೈಟ್ ಫೆಡರೇಷನ್ ಆಫ್ ಇಂಡಿಯಾದ ಸ್ಥಾಪಕ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈಯವರಿಗೆ ಪಿತೃ ವಿಯೋಗ

- Advertisement -
- Advertisement -

ಬಂಟ್ವಾಳ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾಜಿ ಕೋಶಾಧಿಕಾರಿ ಮತ್ತು ಹ್ಯೂಮನ್ ರೈಟ್ ಫೆಡರೇಷನ್ ಆಫ್ ಇಂಡಿಯಾದ ಸ್ಥಾಪಕ ಅಧ್ಯಕ್ಷರಾದ ಕೊಲ್ಲಾಡಿ ಬಾಲಕೃಷ್ಣ ರೈ ಯವರ ತಂದೆ ಮುಂಡ್ರಾಡಿ ಗುತ್ತು ನಾರಾಯಣ ರೈ ರವರು ನಿಧನರಾದರು.

ನಾರಾಯಣ ರೈ ರವರು ನಿವೃತ್ತ ಮುಖ್ಯ ಅಧ್ಯಾಪಕರಾಗಿದ್ದು, ಸಾಮಾಜಿಕ ಮತ್ತು ರಾಜಕೀಯ ಧುರೀಣರು, ಹವ್ಯಾಸಿ ಯಕ್ಷಗಾನ ಕಲಾವಿದರು, ರಂಗಭೂಮಿ ಪ್ರಸಾದನ ಕಲಾವಿದರು, ದಿವಂಗತ ಶ್ರಿ ಸಂಕಪ್ಪ ರೈ ಪುತ್ತೂರು ಇವರ ಮತ್ತು ಜನಾರ್ಧನ ಪೂಜಾರಿ ಹಾಗೂ ವೀರಪ್ಪ ಮೊಯ್ಲಿ ಅವರುಗಳ ನಿಕಟವರ್ತಿಯಾಗಿದ್ದಾರೆ.

vtv vitla
vtv vitla

ಇವರ ಅಂತ್ಯಕ್ರಿಯೆಯು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕೊಲ್ಲಾಡಿ ಮನೆಯಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಮೃತರು ಪತ್ನಿ ಶಾರದಾ ಯನ್ ರೈ ಮತ್ತು ಪುತ್ರರಾದ ವಿದ್ಯಾನಂದ ರೈ , ಬಾಲಕೃಷ್ಣ ರೈ ಹಾಗೂ ಐದು ಪುತ್ರಿಯರು ಮತ್ತು ಅಳಿಯಂದಿರು, ಮೊಮ್ಮಕ್ಕಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

- Advertisement -

Related news

error: Content is protected !!