Monday, July 7, 2025
spot_imgspot_img
spot_imgspot_img

ಬೆಳ್ತಂಗಡಿ: ಶಾಲೆಗೆಂದು ತೆರಳಿದ್ದ ಮಕ್ಕಳು ನಾಪತ್ತೆ; ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳು ಪತ್ತೆ ಹಚ್ಚಿದ ಪೊಲೀಸರು

- Advertisement -
- Advertisement -

ಬೆಳ್ತಂಗಡಿ: ಶಾಲೆಗೆಂದು ಮನೆಯಿಂದ ಹೊರಟ ಇಬ್ಬರು ಮಕ್ಕಳು ಶಾಲೆಗೆ ತೆರಳದೇ ನಾಪತ್ತೆಯಾದ ಘಟನೆ ಬೆಳ್ತಂಗಡಿಯ ಮೇಲಂತಬೆಟ್ಟು ಕಾಲೇಜು ಸಮೀಪ ನಡೆದಿದೆ.

ಲಾಯಿಲ ಗ್ರಾಮದ ಪಡ್ಲಾಡಿ ಸ.ಕಿ.ಪ್ರಾ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಮಕ್ಕಳ ಹೆತ್ತವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಡಿಕೇರಿ ಮೂಲದ ದಂಪತಿಯ ಮಕ್ಕಳಾದ ಮಂಜುನಾಥ್ 4ನೇ ತರಗತಿ ಹಾಗೂ ನೇತ್ರಾವತಿ 1ನೇ ತರಗತಿ ಇವರು ಬೆಳಿಗ್ಗೆ ಮನೆಯಿಂದ ಸೈಕಲಿನಲ್ಲಿ ದಿನಂಪ್ರತಿ ಶಾಲೆಗೆ ಹೋಗುವಂತೆ ಇಂದು ಬೆಳಿಗ್ಗೆ ಶಾಲೆಗೆ ಹೊರಟಿದ್ದರು. ಆದರೆ ಶಾಲೆಗೆ ಮಕ್ಕಳು ಬರಲಿಲ್ಲ ಎಂದು ಮುಖ್ಯೋಪಾಧ್ಯಾಯರು ಹೆತ್ತವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಹೆತ್ತವರು ಆತಂಕಗೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಲ್ಲೆಡೆ ಹುಡುಕಾಡಿದಾಗ ಮಕ್ಕಳು ತೋಟದಲ್ಲೇ ಆಟವಾಡುತ್ತಿರುವುದು ಎನ್ನಲಾಗಿದೆ. ಇದೀಗ ಬೆಳ್ತಂಗಡಿ ಪೊಲೀಸರು ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

astr
- Advertisement -

Related news

error: Content is protected !!