Thursday, June 18, 2026
spot_imgspot_img
spot_imgspot_img

ಬೆಳ್ಳಾರೆ: ಯುವ ಉದ್ಯಮಿ ಕಿಡ್ನಾಪ್‌ ಪ್ರಕರಣ; ಮಡಿಕೇರಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬ್ರೇಕ್; ಪೊಲೀಸರಿಗೆ ಹಸ್ತಾಂತರ

- Advertisement -
- Advertisement -

ಬೆಳ್ಳಾರೆಯ ಕಾಮಧೇನು ಗೋಲ್ಡ್‌ ಪ್ಯಾಲೇಸ್‌ನ ಮಾಲಕ, ದಿವ್ರಪ್ರಭಾ ಚಿಲ್ತಡ್ಕ ಅವರ ಅಳಿಯ ನವೀನ್ ಅಪಹರಣ ಪ್ರಕರಣ ಈಗ ತಕ್ಕ ಮಟ್ಟಿಗೆ ಸುಖಾಂತ್ಯ ಕಂಡಿದೆ. ಮಡಿಕೇರಿಯ ಶುಂಠಿಕೊಪ್ಪ ಎಂಬಲ್ಲಿ ಕಿಡ್ನಾಪರ್ ಗಳ ವಾಹನಕ್ಕೆ ತಡೆವೊಡ್ಡಿ ನವೀನ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಬರದಿಯಾಗಿತ್ತು.

ನವೀನ್‌ ಅವರನ್ನು ಆಂಬ್ಯುಲೆನ್ಸ್ ನಲ್ಲಿ‌ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಸುಂಟಿಕೊಪ್ಪ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

PREVIOUS NEWS: ಬೆಳ್ಳಾರೆ: ಯುವ ಉದ್ಯಮಿ, ದಿವ್ಯಪ್ರಭಾ ಚಿಲ್ತಡ್ಕ ಅವರ ಅಳಿಯನ ಕಿಡ್ನಾಪ್‌

- Advertisement -

Related news

error: Content is protected !!