Wednesday, September 16, 2026
spot_imgspot_img
spot_imgspot_img

ಮಂಗಳೂರು: ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು

- Advertisement -
- Advertisement -

ಮಂಗಳೂರು: ಈಜಲು ತೆರಳಿದ ಯುವಕನೋರ್ವ ಕಲ್ಲಿನ ಕೋರೆಯ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರವಿವಾರ ಮಲ್ಲೂರು ಸಮೀಪದ ಉಳಾಯಿಬೆಟ್ಟು ಬದ್ರಿಯ ನಗರದಲ್ಲಿ ನಡೆದಿದೆ.

ಜೋಕಟ್ಟೆಯ ನಿವಾಸಿ ಆದಂ ಎಂಬವರ ಪುತ್ರ ಮುಹಮ್ಮದ್ ಶಿಯಾಝ್(19) ಮೃತ ಯುವಕ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ರವಿವಾರ ಬೆಳಗ್ಗೆ ಶಿಯಾಝ್ ಉಳಾಯಿಬೆಟ್ಟುವಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ಎನ್ನಲಾಗಿದೆ. ಅಲ್ಲಿಂದ ಸಂಜೆಯ ವೇಳೆಗೆ ತನ್ನ ಸ್ನೇಹಿತರೊಂದಿಗೆ ಬದ್ರಿಯಾ ನಗರದ ಪೆರ್ಮುಂಕಿ ಕಾಯರ ಪದವುನಲ್ಲಿರುವ ಕಲ್ಲಿನ ಕೋರೆಗೆ ಈಜಲು ತೆರಳಿದ್ದಾನೆ. ಈ ಸಂದರ್ಭ ಕೋರೆಯ ಆಳ ತಿಳಿಯದೆ ಈಜಲು ಮುಂದಾಗಿದ್ದು, ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!