Monday, June 15, 2026
spot_imgspot_img
spot_imgspot_img

ಮಂಗಳೂರು: ಕಾಡು ಪ್ರಾಣಿ ಬೇಟೆ; 12 ಮಂದಿಯ ಬಂಧನ

- Advertisement -
- Advertisement -

ಮಂಗಳೂರು: ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಯಡ್ಕ ಗುಡ್ಡೆಯಂಗಡಿಯಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ12 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಜಾನ್‌ ಮನೆಜಸ್‌‌, ಶ್ರೀನಿವಾಸ್‌, ಗುರುಪ್ರಸಾದ್‌, ಜೋಯಲ್‌ ಅನಿಲ್‌ ಡಿಸೋಜಾ, ಅನಜಯ್‌‌, ಸನತ್‌, ಹರೀಶ್‌ ಪೂಜಾರಿ, ಮೋಹನ್‌ ಗೌಡ, ನೋಣಯ್ಯ, ವಿನಯ್‌‌ ಪೂಜಾರಿ, ರಮೇಶ್‌ ಹಾಗೂ ಗಣೇಶ್‌ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 4 ಗನ್, 1 ಗ್ಯಾಸ್ ಸಿಲಿಂಡರ್, 12 ಮೊಬೈಲ್ ಫೋನ್, 2ಮರದ ತುಂಡು, ಗ್ಯಾಸ್ ಬರ್ನರ್, ನೆಟ್, 2 ಓಮ್ನಿ ಕಾರ್ ಮತ್ತು ಇತರ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!