


ಮಂಗಳೂರು: ಮಂಗಳೂರಿನ ಶರವು ಮಹಾಗಣಪತಿ ದೇವಸ್ತಾನ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರಿಂದ ಡಿಸೆಂಬರ್ 23ರವರೆಗೆ ಈ ರಸ್ತೆಯಲ್ಲಿನ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಕೆ.ಎಸ್.ಆರ್ ರಸ್ತೆಯಿಂದ ಪಿ.ಎಂ. ರಾವ್ ರಸ್ತೆಯ ಮೂಲಕ ಗಣಪತಿ ಹೈಸ್ಕೂಲ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಜೊತೆಗೆ ಶರವು ವಿಮಲೇಶ್ ಜಂಕ್ಷನ್ ನಿಂದ ಕೆ.ಎಸ್.ಆರ್. ಜಂಕ್ಷನ್ ವರಗಿನ ರಸ್ತೆಯಲ್ಲಿ ಶರವು ಮಹಾಗಣಪತಿ ದೇವಸ್ಥಾನ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬದಲಿ ಮಾರ್ಗವಾಗಿ ವಾಹನಗಳು ನೇರವಾಗಿ ಹಂಪನಕಟ್ಟೆ ಜಂಕ್ಷನ್ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಕೆ.ಬಿ.ಕಟ್ಟೆ ಜಂಕ್ಷನ್ ಗಣಪತಿ ಹೈಸ್ಕೂಲ್ ರಸ್ತೆ ಶರವು ದೇವಸ್ಥಾನ ರಸ್ತೆಯ ಮೂಲಕ ಕೆ.ಎಸ್.ಆರ್.ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಪಿ.ಎಂ.ರಾವ್ ರಸ್ತೆಯ ಮೂಲಕ ಕೆ.ಎಸ್.ಆರ್ ರಸ್ತೆ ಕಡೆಗೆ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









