Wednesday, July 22, 2026
spot_imgspot_img
spot_imgspot_img

ಮಂಗಳೂರು: ದ.ಕ ಜಿಲ್ಲೆಯಲ್ಲಿ ವಿದ್ಯಾರ್ಜನೆ ಮಾಡಿದ ನಾಲ್ವರಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ರ್‍ಯಾಂಕ್

- Advertisement -
- Advertisement -

ಮಂಗಳೂರು: ಕೇಂದ್ರ ಸರ್ಕಾರ ನಡೆಸಿದ ಯುಪಿಎಸ್ ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಕರ್ನಾಟಕದ ಅಭ್ಯರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಸಂಗ ಪಡೆದವರಾಗಿದ್ದಾರೆ.

92ನೇ ರ್‍ಯಾಂಕ್ ಪಡೆದ ಚಿತ್ರದುರ್ಗದ ಡಾ.ಬೆನಕಪ್ರಸಾದ್ ಮತ್ತು 139ನೇ ರ್‍ಯಾಂಕ್ ಪಡೆದ ವಿಜಯಪುರ ಜಿಲ್ಲೆಯ ತಾಳಿಕೋಟೆಯ ನಿಕಿಲ್ ಪಾಟೀಲ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಂಟ್ವಾಳದ ಅಳಿಕೆಯಲ್ಲಿರುವ ಅಳಿಕೆ ಸತ್ಯಸಾಯಿಬಾಬಾ ಲೋಕಸೇವಾ ಎಜುಕೇಶನ್ ಟ್ರಸ್ಟ್‌ನಲ್ಲಿ ಪಡೆದಿದ್ದಾರೆ.

191ನೇ ರ್‍ಯಾಂಕ್ ಪಡೆದಿರುವ ಕೊಪ್ಪಳ ಗಂಗಾವತಿಯ ಅಪೂರ್ವ ಬಾಸೂರು ಮಂಗಳೂರಿನ ಎಕ್ಸ್‌ಪರ್ಟ್ಸ್ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಪಿಯುಸಿ ಓದಿದ್ದರೆ, 311ನೇ ರ್‍ಯಾಂಕ್ ಪಡೆದ ಹೊನ್ನಾವರದ ದೀಪಕ್ ಶೇಟ್ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಓದಿದ್ದಾರೆ.

vtv vitla
- Advertisement -

Related news

error: Content is protected !!