Monday, July 27, 2026
spot_imgspot_img
spot_imgspot_img

ಮಂಗಳೂರು: ನಾಗನಕಟ್ಟೆಯಿಂದ ನಾಪತ್ತೆಯಾಗಿದ್ದ ನಾಗನ ಕಲ್ಲುಗಳು ಪತ್ತೆ!

- Advertisement -
- Advertisement -

ಮಂಗಳೂರು: ಕೆಲವು ದಿನಗಳ ಹಿಂದೆ ನಗರದ ಹೊರವಲಯದ ಕೂಳೂರಿನ ನಾಗನಕಟ್ಟೆಯಿಂದ ಕಾಣೆಯಾಗಿದ್ದ 6 ನಾಗನ ಕಲ್ಲುಗಳು ಮಂಗಳವಾರ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿವೆ.

ಈ ನಾಗನಕಟ್ಟೆಯಲ್ಲಿ 19 ನಾಗನ ಕಲ್ಲುಗಳಿದ್ದವು. ಆ ಪೈಕಿ 6 ನಾಗನಕಲ್ಲುಗಳು ಕಳೆದ ಶನಿವಾರ ನಾಪತ್ತೆಯಾಗಿದ್ದವು. ಅಲ್ಲದೇ ಒಂದು ಕಲ್ಲನ್ನು ಒಡೆದು ಹಾನಿಗೊಳಿಸಲಾಗಿತ್ತು.ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕಾವೂರು ಪೊಲೀಸರು ಮಂಗಳವಾರ ಬೆಳಗ್ಗೆ ನಾಗನ ಕಲ್ಲಿಗಾಗಿ ಹುಡುಕಾಟ ಆರಂಭಿಸಿದ್ದರು.

ಅದರಂತೆ ನಾಗನಕಟ್ಟೆ ಸಮೀಪದ ಬಾವಿಯ ನೀರನ್ನು ಖಾಲಿ ಮಾಡಿ ಹುಡುಕಲಾಯಿತು. ಆದರೆ ಕಲ್ಲು ಪತ್ತೆಯಾಗಿರಲಿಲ್ಲ. ಬಳಿಕ ಸಮೀಪದಲ್ಲೇ ಇರುವ ನೀರು ತುಂಬಿದ ಸ್ಥಳದಲ್ಲಿ ಕಲ್ಲುಗಳು ಪತ್ತೆಯಾಗಿವೆ. ಈ ಕೃತ್ಯವೆಸಗಿದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!