Tuesday, September 8, 2026
spot_imgspot_img
spot_imgspot_img

ಮಂಗಳೂರು: ನೀರುಮಾರ್ಗ ಕೋರ್ದಬ್ಬು, ತನ್ನಿಮಾನಿಗ, ರಾಹುಗುಳಿಗ ದೈವಸ್ಥಾನದ ಕಾಣಿಕೆ ಡಬ್ಬದಿಂದ ನಗದು ಕಳವು

- Advertisement -
- Advertisement -

ಮಂಗಳೂರು: ನಗರ ಹೊರವಲಯದ ನೀರುಮಾರ್ಗ ಶಾಂತಿಗುರಿಯ ಕೋರ್ದಬ್ಬು, ತನ್ನಿಮಾನಿಗ, ರಾಹುಗುಳಿಗ ದೈವಸ್ಥಾನದ ಕಾಣಿಕೆ ಡಬ್ಬದಿಂದ ಹಣವನ್ನು ಕಳವುಗೈದ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೂರು ಕಾಣಿಕೆ ಡಬ್ಬದಿಂದ ಸುಮಾರು 15 ಸಾವಿರ ರೂ. ನಗದು ಕಳವುಗೈದಿದ್ದಾರೆ ಎಂದು ದೂರು ದಾಖಲಾಗಿದೆ. ಶನಿವಾರ ರಾತ್ರಿ 7ಕ್ಕೆ ದೈವಸ್ಥಾನದ ಬಾಗಿಲು ಹಾಕಲಾಗಿತ್ತು. ರವಿವಾರ ಬೆಳಗ್ಗೆ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಮುಖ್ಯ ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬ, ದೈವಸ್ಥಾನದ ಹೊರಗಡೆಯಿದ್ದ ಕಾಣಿಕೆ ಡಬ್ಬ ಹಾಗೂ ದೈವಸ್ಥಾನದ ಬಾಗಿಲು ಮುರಿದು ಒಳಗೆ ನುಗ್ಗಿ ನಗದು ಕಳವುಗೈದಿದ್ದಾರೆ ಎಂದು ಹೇಳಲಾಗಿದೆ. ದೈವಸ್ಥಾನದ ಒಳಗಿದ್ದ 7 ಪವನ್ ಚಿನ್ನ ಮತ್ತು ಬೆಳ್ಳಿಯ ಇತರ ಸೊತ್ತುಗಳನ್ನು ಖದೀಮರು ಮುಟ್ಟಿಲ್ಲ.

ದೈವಸ್ಥಾನದಲ್ಲಿ ಹಾಕಲಾದ ಸಿಸಿ ಕ್ಯಾಮೆರಾ ಕೆಟ್ಟು ಹೋಗಿದ್ದು, ಆರೋಪಿಗಳ ಚಹರೆ ಪತ್ತೆಯಾಗಿಲ್ಲ.

- Advertisement -

Related news

error: Content is protected !!