Friday, June 19, 2026
spot_imgspot_img
spot_imgspot_img

ಮಂಗಳೂರು: ಪತ್ನಿ ಜೊತೆ ಕಲಹ; ವ್ಯಕ್ತಿ ನಾಪತ್ತೆ.!?

- Advertisement -
- Advertisement -

ಮಂಗಳೂರು: ಪತ್ನಿ ಜೊತೆ ಕೋಪಕೊಂಡ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಮನೆಯಿಂದ ಹೊರಟು ಹೋಗಿದ್ದ ವ್ಯಕ್ತಿಯ ಬೈಕ್ ಸೇತುವೆಯ ಮೇಲೆ ಪತ್ತೆಯಾಗಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಪ್ರಕರಣವೊಂದು ಬಜ್ಜೆ ಠಾಣಾ ವ್ಯಾಪ್ತಿಯ ಮರವೂರು ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಮಂಗಳೂರು ನಗರ ಕದ್ರಿ ಠಾಣಾ ವ್ಯಾಪ್ತಿಯ ವ್ಯಾಸನಗರ ನಿವಾಸಿ ವಿವೇಕ್ ಪ್ರಭು(45) ಎಂದು ಗುರುತಿಸಲಾಗಿದ್ದು, ಈ ಬಗ್ಗೆ ವಿವೇಕ್ ಅವರ ಪತ್ನಿ ನೀಡಿದ ದೂರನಂತೆ ಕದ್ರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.


ಫಳ್ನಿರ್ ಬಳಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್, ಕಳೆದ ಮಂಗಳವಾರ ರಾತ್ರಿ ಮನೆಯಲ್ಲಿ ಪತ್ನಿ ಜೊತೆ ಯಾವುದೋ ಕಾರಣಕ್ಕೆ ಕಲಹ ಉಂಟಾಗಿತ್ತು. ಆ ಬಳಿಕ ಮನೆಯಿಂದ ಹೊರಹೋದ ವಿವೇಕ್ ಅವರ ಬೈಕ್ ಕೀ ಸಹಿತ ಮರವೂರು ಸೇತುವೆಯ ಬಳಿ ಪತ್ತೆಯಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಳೆಯಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಶೋಧ ಕಾರ್ಯಕ್ಕೂ ತೊಡಕು ಉಂಟಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!