- Advertisement -
- Advertisement -

ಮಂಗಳೂರು: ಬ್ಯಾಂಕ್ ಗೆ ಹಣ ಕಟ್ಟಲು ತೆರಳುತ್ತಿದ್ದ ವ್ಯಕ್ತಿಯಿಂದ ಸುಲಿಗೆ ಮಾಡಿರುವ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ.

ಪೆಟ್ರೋಲ್ ಬಂಕ್ ಮ್ಯಾನೇಜರ್ ಬ್ಯಾಂಕ್ ಗೆ ಹಣ ಹಾಕಲು ತೆರಲುತ್ತಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಗಾಂಧಿನಗರದ ಆಶೀರ್ವಾದ್ ಪೆಟ್ರೋಲ್ ಬಂಕ್ ಮ್ಯಾನೇಜರ್ ಬೋಜಪ್ಪ ಇವರಿಂದ 4.20 ಲಕ್ಷ ರೂಪಾಯಿ ಸುಲಿಗೆಯಾಗಿದೆ.

ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಬ್ಯಾಟ್ ನಿಂದ ಹಲ್ಲೆಗೈದು ಸುಲಿಗೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಬೋಜಪ್ಪ ಬಂಕ್ ಗೆ ಬಂದ ಹಣವನ್ನು ಬ್ಯಾಂಕ್ ಗೆ ಜಮಾವನೆ ಮಾಡುತ್ತಿದ್ದರು. ನಿನ್ನೆ ಕೂಡ ಅದೇ ರೀತಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದರೋಡೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





- Advertisement -








