Tuesday, June 23, 2026
spot_imgspot_img
spot_imgspot_img

ಮಂಜೇಶ್ವರ: ಡೆತ್ ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!

- Advertisement -
- Advertisement -

ಮಂಜೇಶ್ವರ: ವಿದ್ಯಾರ್ಥಿನಿಯೊಬ್ಬ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿ ಕುಂಬಳೆ ವೀರ ವಿಠಲ ಕ್ಷೇತ್ರ ಸಮೀಪದ ಸ್ನೇಹಾ (17) ಎನ್ನಲಾಗಿದೆ. ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಇನ್ನೂ, ಸ್ನೇಹನ ಕೋಣೆಯಲ್ಲಿ ಡೆತ್ ನೋಟ್ ಲಭ್ಯವಾಗಿದೆ.

ಕಾಲೇಜಿನಿಂದ ಮನೆಗೆ ಬಂದ ಸ್ನೇಹಾ ಕೆಲ ಸಮಯದ ಬಳಿಕ ಕೋಣೆಯೊಳಗೆ ತೆರಳಿದ್ದು, ರಾತ್ರಿ ಸುಮಾರು 7 ಗಂಟೆ ಕಳೆದರೂ ಕೋಣೆಯಿಂದ ಹೊರ ಬರದ ಹಿನ್ನೆಲೆ ಗಾಬರಿಗೊಂಡ ತಾಯಿ ಬಾಗಿಲು ಬಡಿದರೂ ತೆರೆಯಲಿಲ್ಲ. ಕೊನೆಗೆ ಹಿಂಬದಿಯ ಕಿಟಿಕಿ ಗಾಜು ಒಡೆದು ನೋಡಿದಾಗ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಮನೆಯವರು ಬಾಗಿಲು ಮುರಿದು ಕೆಳಗಿಳಿಸಿ ಕುಂಬಳೆಯ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

ಕೋಣೆಯಿಂದ ಲಭಿಸಿದ ಪತ್ರ ಹಾಗೂ ಸ್ನೇಹಾಳ ಮೊಬೈಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!