Sunday, June 28, 2026
spot_imgspot_img
spot_imgspot_img

ಮದ್ಯ ಸೇವನೆ ವೇಳೆ ಆಮ್ಲೆಟ್ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

- Advertisement -
- Advertisement -

ತೆಲಂಗಾಣ: ಬಾರ್‌ನಲ್ಲಿ ಕುಡಿಯುವಾಗ ಜೊತೆಗೆ ಸೇವಿಸಿದ ಆಮ್ಲೆಟ್ ಗಂಟಲಲ್ಲಿ ಸಿಲುಕಿಕೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ಜನಗಾಮ ಜಿಲ್ಲೆಯ ಬಚನ್ನಪೇಟೆಯಲ್ಲಿ ನಡೆದಿದೆ.

ಬಚ್ಚನ್ನಪೇಟೆಯ ಇದುಲಕಂತಿ ಭೂಪಾಲ್ ರೆಡ್ಡಿ (38) ಮೃತ ವ್ಯಕ್ತಿ. ಈತ ಕುಡಿಯಲೆಂದು ಬಾರ್‌ಗೆ ಹೋಗಿದ್ದು, ಮದ್ಯ ಕುಡಿಯುವಾಗ ಆಮ್ಲೆಟ್‌ನ್ನೂ ಸೇವಿಸಿದ್ದಾನೆ. ಈ ವೇಳೆ ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!