ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ‘ವಾರದ ಬೆಳಕು’ ಸರಣಿಯ 8 ನೇ ವಾರದ ಕಾರ್ಯಕ್ರಮವು ಸೆ.15 ರಂದು ಸರಕಾರಿ ಪ್ರೌಢ ಶಾಲೆ ಮಾಣಿಲದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಶ್ರೀ ಮೋಹನ್ ಮೈರ ರವರು ಕಾನೂನಿನ ಅಜ್ಞಾನದ ಕಾರಣಕ್ಕೆ ಅಪರಾಧಿಗೆ ಶಿಕ್ಷೆ ತಪ್ಪದು ಎಂದು ಹೇಳಿದರು. ‘ಶಾಲಾ ಮಕ್ಕಳಿಗೆ ಕಾನೂನಿನ ಅರಿವು ‘ ವಿಷಯವಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಒಡಿಯೂರು ಶ್ರೀ ಗ್ರಾಮ ವಿಕಾಸ ಸಮಿತಿಯ ಪೆರುವಾಯಿ ಘಟಕದ ಅಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಅವರು ಶಾಲಾ ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಕಾನೂನಿನ ಅರಿವಿನ ಅಗತ್ಯ ದ ಬಗ್ಗೆ ತಿಳಿಸಿದರು. ಎಸ್ ಡಿ ಎಂ ಸಿ ಸದಸ್ಯರು ಹಾಗೂ ‘ವಾರದ ಬೆಳಕು’ ಕಾರ್ಯಕ್ರಮದ ಸಂಯೋಜಕರಾದ ಶ್ರೀ ವಿಷ್ಣು ಕನ್ನಡ ಗುಳಿ ಪ್ರಾಸ್ತಾವಿಕ ನುಡಿಗೈದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಕೆ.ಜಿ ವಹಿಸಿದ್ದರು. ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಚಂದ್ರಶೇಖರ್ ರಾವ್ ಕೊಮ್ಮುಂಜೆ, ಹಿರಿಯ ಶಿಕ್ಷಕರಾದ ಶ್ರೀ ಭುವನೇಶ್ವರ್ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಮಾರಿ ಲಕ್ಷ್ಮೀ ಸ್ವಾಗತಿಸಿದರು.
ಕುಮಾರಿ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ನವ್ಯಶ್ರೀ ವಂದಿಸಿದರು.









